ಸಿನಿ ಸುದ್ದಿ

ಮರಾಠರನ್ನು ಕೆಣಕಿದ‌ ನಿರ್ಮಾ ಜಾಹೀರಾತು : ನಟ ಅಕ್ಷಯ್ ಕುಮಾರ್ ವಿರುದ್ಧ ದೂರು ದಾಖಲು

Published

on

ಸುದ್ದಿದಿನ,ಮುಂಬೈ: ನಿರ್ಮಾ ಡಿಟರ್ಜಂಟ್ ಜಾಹೀರಾತಿನಲ್ಲಿ ಮರಾಠಾ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಿದ್ದಕ್ಕಾಗಿ ಅಕ್ಷಯ್ ಕುಮಾರ್ ವಿರುದ್ಧ ಇಬ್ಬರು ವ್ಯಕ್ತಿಗಳು ಬುಧವಾರ ಪೊಲೀಸರಿಗೆ ದೂರು ನೀಡಿದ್ದಾರೆ.

ಅಕ್ಷಯ್ ಕುಮಾರ್ ಮರಾಠಾ ಯೋಧ ಎಂದು ತೋರಿಸಿದ ನಿರ್ಮಾ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು, ಅದರಲ್ಲಿ ಮರಾಠಿ ಸಂಸ್ಕೃತಿಯನ್ನು ಕೆಣಕಿದ್ದಾರೆ. ಶಿವಾಜಿ ಮಹಾರಾಜರ ಅನುಯಾಯಿಗಳ ಭಾವನೆಗಳನ್ನು ನೋಯಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಜಾಹೀರಾತು ಚಿತ್ರದಲ್ಲಿ ಕುಮಾರ್ ಅವರನ್ನು ಮರಾಠಾ ಯೋಧ ಎಂದು ಚಿತ್ರಿಸಲಾಗಿದೆ.

ಜಾಹೀರಾತಿನಲ್ಲಿ, ಅಕ್ಷಯ್ ಯುದ್ಧದಿಂದ ಹಿಂತಿರುಗಿರುವುದನ್ನು ಕಾಣಬಹುದು ಮತ್ತು ತಕ್ಷಣವೇ ಅವನ ಹೆಂಡತಿಯು ಕೊಳಕು ಬಟ್ಟೆಗಳಿಗಾಗಿ ದೂಷಿಸುತ್ತಾಳೆ. ನಂತರ ಅವನು ತನ್ನ ಬಟ್ಟೆಗಳನ್ನು ಒಗೆಯಲು ಡಿಟರ್ಜೆಂಟ್ ಅನ್ನು ಹೊರತೆಗೆಯುತ್ತಾನೆ. ಇದು ಮರಾಠಾ ಸಮುದಾಯವನ್ನು ಅಪಹಾಸ್ಯ ಮಾಡಿದ ಆರೋಪದ ಮೇಲೆ ಮುಂಬೈನ ವರ್ಲಿ ಪೊಲೀಸ್ ಠಾಣೆಯಲ್ಲಿ ಖಿಲಾಡಿ ಕುಮಾರ್ ವಿರುದ್ಧ ದೂರು ದಾಖಲಿಸಲಾಗಿದೆ.

ನಿರ್ಮಾ ಜಾಹೀರಾತು

 

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version