ದಿನದ ಸುದ್ದಿ
ರಾಜ್ಯದಲ್ಲಿ ಲೋಡ್‌ಶೆಡ್ಡಿಂಗ್ ಇಲ್ಲ : ಸಚಿವ ಕೆ.ಜೆ.ಜಾರ್ಜ್
ಸುದ್ದಿದಿನ, ರಾಯಚೂರು : ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ. ರಾಯಚೂರಿನಲ್ಲಿರುವ ಹಳೆಯದಾದ ಶಾಖೋತ್ಪನ್ನ ಘಟಕಗಳನ್ನು ನವೀಕರಣವನ್ನು ಹಂತಹಂತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಶಾಖೋತ್ಪನ್ನ ಘಟಕಗಳನ್ನು ದುರಸ್ತಿ ಮಾಡುವ ಸಂದರ್ಭದಲ್ಲಿ ಕೆಲವು ಪ್ರದೇಶಗಳಲ್ಲಿ ವಿದ್ಯುತನ್ನು ನಿಲುಗಡೆ ಮಾಲಾಗುವುದು ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ 2 ಕೋಟಿ 14 ಲಕ್ಷ ಉಚಿತ ವಿದ್ಯುತ್ ಫಲಾನುಭವಿಗಳಿದ್ದು, ಈಗಾಗಲೇ 52 ಲಕ್ಷ ಜನ ಅರ್ಜಿ ಸಲ್ಲಿಸಿದ್ದಾರೆ. ಸರ್ವರ್ ಸಮಸ್ಯೆ ಇದ್ದರೂ ಅರ್ಜಿ ಸಲ್ಲಿಸಲು ಕೊನೆ ದಿನ ನಿಗದಿ ಮಾಡಿಲ್ಲ.
ವಿದ್ಯುತ್ ಶುಲ್ಕ ಹೆಚ್ಚಳದ ಬಗ್ಗೆ ಬಿಲ್ ಪಾವತಿಸಲು ಗ್ರಾಹಕರಿಗೆ ಗಡವು ನೀಡಲಾಗುತ್ತದೆ. ವಿದ್ಯುತ್ ದರ ಹೆಚ್ಚಿಸಿದ ಬಿಜೆಪಿಯವರೇ ಬೀದಿಗಿಳಿದು ಹೋರಾಟ ಮಾಡುತ್ತಿರುವುದು ವಿಪರ್ಯಾಸ ಎಂದು ಸಚಿವರು ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243