ದಿನದ ಸುದ್ದಿ
ಹೊಟೇಲ್-ರೆಸ್ಟೋರೆಂಟ್‌ಗಳಲ್ಲಿ ಗ್ರಾಹಕರಿಂದ ಸೇವಾ ಶುಲ್ಕ ವಿಧಿಸುವಂತಿಲ್ಲ
ಸುದ್ದಿದಿನ,ನವದೆಹಲಿ: ಹೊಟೇಲ್ ಅಥವಾ ರೆಸ್ಟೋರೆಂಟ್‌ಗಳು ಆಹಾರದ ಬಿಲ್‌ಗಳಲ್ಲಿ ಸೇವಾ ಶುಲ್ಕವನ್ನು ವಿಧಿಸಬಾರದು ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ಹೇಳಿದೆ.
ಗ್ರಾಹಕರಿಂದ ಸೇವಾ ಶುಲ್ಕವನ್ನು ಇತರ ಹೆಸರಿನಲ್ಲಿ ಸಂಗ್ರಹಿಸಬಾರದು ಎಂದು ಗ್ರಾಹಕರ ಹಕ್ಕುಗಳ ಉಲ್ಲಂಘನೆ ಕೇಂದ್ರ ಗ್ರಾಹಕರ ರಕ್ಷಣಾ ಪ್ರಾಧಿಕಾರ ಈ ಸಂಬಂಧ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಸೇವಾಶುಲ್ಕ ಪಾವತಿಸುವಂತೆ ಗ್ರಾಹಕರ ಮೇಲೆ ಹೊಟೇಲ್‌ಗಳು ಒತ್ತಡ ಹೇರಬಾರದು. ಗ್ರಾಹಕರು ಸ್ವಯಂ ಪ್ರೇರಣೆಯಾಗಿ ಸೇವಾ ಶುಲ್ಕ ಕೊಡಬಹುದು, ಗ್ರಾಹಕನ ವಿವೇಚನೆಗೆ ಬಿಟ್ಟ ವಿಷಯವಾಗಿದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243