ದಿನದ ಸುದ್ದಿ

ತಳಿ ಶಾಸ್ತ್ರಜ್ಞ ಸ್ವಾಂಟೆ ಪಾಬೊಗೆ ನೋಬೆಲ್ ಪರಸ್ಕಾರ

Published

on

ಸುದ್ದಿದಿನ ಡೆಸ್ಕ್ : ತಮ್ಮ ಅಳಿದುಹೋದ ಪೂರ್ವಜರಿಂದ ನವಯುಗದ ಮಾನವರು ಹೇಗೆ ಅಭಿವೃದ್ಧಿ ಹೊಂದಿದ್ದಾರೆ ಎಂದು ಅರಿತುಕೊಳ್ಳಲು ಮಾಹಿತಿಯನ್ನು ಒದಗಿಸುವ ಔಷಧಿ ಅಥವಾ ಶರೀರ ಶಾಸ್ತ್ರದ ಕುರಿತ ಅನ್ವೇಷಣೆಗೆ ಸ್ವಿಡನ್ನಿನ ತಳಿ ಶಾಸ್ತ್ರಜ್ಞ ಸ್ವಾಂಟೆ ಪಾಬೊ ( Swedish scientist Svante Paabo )‌ಅವರಿಗೆ 2022ನೇ ಸಾಲಿನ ಪ್ರತಿಷ್ಠಿತ ನೋಬಲ್ ಪುರಸ್ಕಾರ ( Nobel prize ) ಲಭಿಸಿದೆ.

ಇವರ ಆವಿಷ್ಕಾರಗಳು ಮಾನವನ ರೋಗ ನಿರೋಧಕ ಶಕ್ತಿ ಮತ್ತು ಅಳಿದು ಹೋದ ಸೋದರ ಸಂಬಂಧಿಗಳಿಗೆ ಹೋಲಿಸಿದರೆ ಮಾನವರ ವಿಶಿಷ್ಟತೆ ಏನು ಎಂಬುದರ ಬಗ್ಗೆಯೂ ಸೂಕ್ಷ್ಮ ಮಾಹಿತಿ ಒದಗಿಸುತ್ತವೆ ಎಂದು ಪ್ರಶಸ್ತಿ ಆಯ್ಕೆ ಮಂಡಳಿ ತಿಳಿಸಿದೆ. ಪೂರ್ವಜರು ಮತ್ತು ಆಧುನಿಕ ಯುಗದ ಮಾನವರ ಮಧ್ಯೆ ಇರುವ ಸಂಬಂಧವನ್ನು ತಿಳಿಯಪಡಿಸುವ ಸಂಪೂರ್ಣ ನಿಯಾಂಡೆರ್ಥಲ್ ಜಿನೋಮ್ ಅನ್ನು ಅನುಕ್ರಮಗೊಳಿಸುವ ಪ್ರಮುಖ ಸಾಧನೆಯನ್ನು ಪಾಬೋಸ್ ಮಾಡಿದ್ದಾರೆ.

ಜರ್ಮನಿಯ ಮ್ಯುನಿಚ್ ವಿಶ್ವವಿದ್ಯಾಲಯದಲ್ಲಿ ಮತ್ತು ಲೀಪ್‌ಜಿಂಗ್‌ನ ಮ್ಯಾಕ್ಸ್ ಪ್ಲಾಂಕ್ ಸಂಸ್ಥೆಯಲ್ಲಿ ವಿಕಸನೀಯ ಮಾನವಶಾಸ್ತ್ರ ಕುರಿತು 67ವಯೋಮಾನದ ಪಾಬೊ ತಮ್ಮ ಪ್ರಶಸ್ತಿ ವಿಜೇತ ಅಧ್ಯಯನವನ್ನು ಮಾಡಿದ್ದಾರೆ. ಪಾಬೊ 1982 ರಲ್ಲಿ ನೋಬಲ್ ಪ್ರಶಸ್ತಿ ವಿಜೇತ ಸುನೆ ಬರ್ಗ್‌ಸ್ಟ್ರೋಮ್ ಅವರ ಸುಪುತ್ರರಾಗಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version