ದಿನದ ಸುದ್ದಿ
ಕೇಂದ್ರ ಅಲೆಮಾರಿ ಆಯೋಗಕ್ಕೆ ‘ಅಲೆಮಾರಿ ಬುಡಕಟ್ಟು ಮಹಾಸಭಾ’ದಿಂದ ಹಲವು ಬೇಡಿಕೆಗಳ ಮನವಿ ಸಲ್ಲಿಕೆ
ಸುದ್ದಿದಿನ, ಬೆಂಗಳೂರು : ಕೇಂದ್ರ ಸರ್ಕಾರದ ವತಿಯಿಂದ ಬಿಕೋ ರಾಮಜಿ ಇದಾತೆ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರದಲ್ಲಿ ಆಯೋಗವನ್ನು ರಚನೆ ಮಾಡಿದ್ದಾರೆ. ಇದಕ್ಕೆ ಪೂರಕವಾಗಿ ಬೆಂಗಳೂರು ನಗರದಲ್ಲಿ ರಾಜ್ಯದ ಅಲೆಮಾರಿಗಳ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ಚರ್ಚೆ ಮಾಡಲು ಮತ್ತು ಇತ್ತೀಚಿಗೆ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಕುರಿತಾದ ಬೆಳವಣಿಗೆಗಳ ಬಗ್ಗೆ ಪರಿಶೀಲನೆ ಮಾಡಲು ಆಗಮಿಸಿದ್ದಾರೆ.
ಇದರ ಅಂಗವಾಗಿ ಅಲೆಮಾರಿ ಬುಡಕಟ್ಟು ಮಹಾಸಭಾದ ವತಿಯಿಂದ ಆಯೋಗದ ಅಧ್ಯಕ್ಷರಾದ ಬಿಕೂ ರಾಮಜಿ ಇದಾತೆ ಅವರನ್ನು ಶುಕ್ರವಾರ ಬೆಂಗಳೂರಿನ ಕುಮಾರಕೃಪಾ ವಸತಿಗೃಹದಲ್ಲಿ ಅವರಿಗೆ ಹಲವು ಬೇಡಿಕೆಗಳ ಹಕ್ಕೊತ್ತಾಯದ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಬೇಡಿಕೆಗಳು
- ಅಲೆಮಾರಿ ಸಮುದಾಯಗಳ ಸಂಶೋಧನಾ ಸಂಸ್ಥೆ ಮತ್ತು ಅಧ್ಯಯನ ಕೇಂದ್ರ ಕರ್ನಾಟಕದಲ್ಲಿ ನಿರ್ಮಿಸುವುದು.
- ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ಅಲೆಮಾರಿ ಅಭಿವೃದ್ಧಿ ಕೋಶವನ್ನು ನಿಗಮ ಮಂಡಳಿ ಯನ್ನಾಗಿ ಪರಿವರ್ತಿಸುವುದು
- ಎಸ್ಸಿಪಿ ಮತ್ತು ಟಿಎಸ್ಪಿ ಅನುದಾನದಲ್ಲಿ ಅಲೆಮಾರಿಗಳಿಗಾಗಿ ಪ್ರತ್ಯೇಕವಾದ 2000 ಕೋಟಿ ಹಣವನ್ನು ಮೀಸಲಾಗಿ ಇಡುವುದು
- ಆಯೋಗದಲ್ಲಿ ಪ್ರತಿ ಸಮುದಾಯದ ಒಬ್ಬ ಪ್ರತಿನಿಧಿಯನ್ನು ಆಯೋಗದ ಸದಸ್ಯರನ್ನಾಗಿ ನೇಮಕ ಮಾಡಿಕೊಳ್ಳವುದು.
- ಅಲೆಮಾರಿ ಸಮುದಾಯದ ಪರವಾಗಿ ಯಾರನ್ನಾದರೂ ಒಬ್ಬರನ್ನು ಶಾಸಕಾಂಗ ಅಥವಾ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡುವುದು.
- ಅಲೆಮಾರಿಗಳ ಕೂಲಂಕುಷವಾದ ವೈಜ್ಞಾನಿಕ ಜನಗಣತಿ ಮಾಡುವುದು.
ಈ ಸಂದರ್ಭದಲ್ಲಿ ಅಲೆಮಾರಿ ಬುಡಕಟ್ಟು ಮಹಾಸಭಾದ ಪದಾಧಿಕಾರಿಗಳಾದ ಲೋಹಿತಾಕ್ಷ ರಾಜ್ಯಾಧ್ಯಕ್ಷರು ,ಅನಂದ್ ಕುಮಾರ್ ಏಕಲವ್ಯ, ಉಪಾಧ್ಯಕ್ಷರು ,ಬಿಎಚ್ ಮಂಜುನಾಥ್ಉಪಾಧ್ಯಕ್ಷರು ,ವೆಂಕಟರಮಣಯ್ಯ ಕಾರ್ಯಾಧ್ಯಕ್ಷರು ,ಕಿರಣ್ ಕುಮಾರ್ ಕೊತ್ತಗೆರೆ ಪ್ರಧಾನ ಕಾರ್ಯದರ್ಶಿ ,ಬಿಟಿ ದಾಸರ್ ಉಪಾಧ್ಯಕ್ಷರು ,ಚೈತ್ರಶ್ರೀ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ತರೀಕೆರೆ,
ರವಿಕುಮಾರ್ ಸಂಘಟನಾ ಕಾರ್ಯದರ್ಶಿಗಳು ಇವರುಗಳ ಉಪಸ್ಥಿತಿಯಲ್ಲಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243