ರಾಜಕೀಯ
ಉತ್ತರ ಕರ್ನಾಟಕ ಬಂದ್ ಬಿಜೆಪಿ ಪ್ರಯೋಜಿತ : ಡಿಕೆಶಿ ವ್ಯಂಗ್ಯ
ಸುದ್ದಿದಿನ ಡೆಸ್ಕ್: ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಕೆಲ ಸಂಘಟನೆಗಳು ಕರೆ ನೀಡಿದ್ದ ಉತ್ತರ ಕರ್ನಾಟಕ ಬಂದ್ ಬಿಜೆಪಿ ಪ್ರಾಯೋಜಿತವಾಗಿದೆ ಎಂದು ಸಚಿವ ಡಿ.ಕೆ. ಶಿವಕುಮಾರ್ ಲೇವಡಿ ಮಾಡಿದ್ದಾರೆ.
ರಾಜ್ಯ ಇಬ್ಭಾಗ ಮಾಡಲು ಹೊರಟಿರುವ ಬಿಜೆಪಿ ನಾಯಕರು ಉತ್ತರ ಕರ್ನಾಟಕ ಬಂದ್ ಗೆ ಪ್ರೇರಣೆ ನೋಡಿದ್ದಾರೆ. ಖಂಡಿತ ಇದು ಬಿಜೆಪಿ ಪಕ್ಷದ ಪ್ರಾಯೋಜಿತ ಬಂದ್ ಆಗಿದೆ. ಬಂದ್ ಗೆ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ನಾವು ರಾಜ್ಯ ಇಬ್ಬಾಗ ಮಾಡಲು ಬಿಡುವುದಿಲ್ಲ. ಅಖಂಡ ಕರ್ನಾಟಕ ನಿರ್ಮಾಣ ಮಾಡುವುದು ನಮ್ಮ ಆದ್ಯತೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.