ದಿನದ ಸುದ್ದಿ
ರಾಜಕೀಯಕ್ಕೆ ಬರುವ ನಿರ್ಧಾರ ಸಧ್ಯಕ್ಕಿಲ್ಲ : ಯದುವೀರ್ ಒಡೆಯರ್
ಸುದ್ದಿದಿನ ಡೆಸ್ಕ್ : ರಾಜಕೀಯಕ್ಕೆ ಬರುವ ನಿರ್ಧಾರ ಸಧ್ಯಕ್ಕಿಲ್ಲ ಎಂದು ಮೈಸೂರಿನಲ್ಲಿ ರಾಜವಂಶಸ್ಥ ಯದುವೀರ್ ಒಡೆಯರ್ ಹೇಳಿದರು.
ನಾನು ಈ ಭಾಗದ ಐತಿಹಾಸಿಕ ಸ್ಥಳಗಳ ಬಗ್ಗೆ ಇನ್ನೂ ತಿಳಿದುಕೊಳ್ಳಬೇಕು.ಮನೆಯ ಜವಾಬ್ದಾರಿಗಳಿದೆ. ಅವುಗಳನ್ನು ನಿಭಾಯಿಸಬೇಕಿದೆ. ನನ್ನನ್ನು ಯಾವುದೇ ರಾಜಕೀಯ ಪಕ್ಷಗಳು ಸಂಪರ್ಕ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.
ಪತ್ನಿ ತ್ರೀಷಿಕಾ ದೇವಿ ಒಡೆಯರ್ ಸಂಶೋಧನೆ ವಿಚಾರವಾಗಿ ಮಾತನಾಡಿದ ಅವರು, ಸದ್ಯ ಪಿಹೆಚ್ ಡಿ ಮಾಡಲು ತಯಾರಿ ನಡೆಸುತಿದ್ದಾರೆ.
ವೈಲ್ಡ್ ಲೈಫ್ ಬಗ್ಗೆ ನನಗೂ, ಅವರಿಗೂ ಇಷ್ಟವಿದೆ.
ಟ್ರೈಬಲ್ಸ್ ಬಗ್ಗೆ ಸಂಶೋಧನೆ ಮಾಡಲು ತಯಾರಿ ನಡೆಸುತ್ತಿದ್ದಾರೆ. ಸದ್ಯ ಅಪ್ಲಿಕೇಶನ್ ಸಲ್ಲಿಸುವ ಕಾರ್ಯದಲ್ಲಿದ್ದಾರೆ ಎಂದರು.
ಅಂಬಾರಿ ರಾಜಮನೆತನಕ್ಕೆ ಸೇರಿದೆ ಅನ್ನೊ ಪ್ರಮೋದಾದೇವಿ ಒಡೆಯರ್ ಹೇಳಿಕೆ ವಿಚಾರವಾಗಿ ನನಗೆ ಆ ಬಗ್ಗೆ ಹೆಚ್ಚಾಗಿ ಮಾಹಿತಿಯಿಲ್ಲ. ಎಲ್ಲಾ ದಾಖಲೆಗಳು ಅವರ ಬಳಿಯೇ ಇದೆ. ಅವರನ್ನೆ ಕೇಳಬೇಕು ಎಂದು ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9886715401