ದಿನದ ಸುದ್ದಿ
ಆಹಾರ ಉದ್ದಿಮೆದಾರರು ಕಡ್ಡಾಯವಾಗಿ ತರಬೇತಿ ಪಡೆಯಲು ಸೂಚನೆ
ಸುದ್ದಿದಿನ,ಕಲಬುರಗಿ : ಎಫ್.ಎಸ್.ಎಸ್.ಎ.ಐ. ಪ್ರಾಧಿಕಾರದಿಂದ ಆಹಾರ ಗುಣಮಟ್ಟ ಮತ್ತು ಸ್ವಚ್ಛತೆ ಕಾಳಜಿವಹಿಸಲು ಹಾಗೂ ಆಹಾರ ಸೇವೆಗಳ ಗುಣಮಟ್ಟವನ್ನು ಬಲಪಡಿಸಲು ಜಿಲ್ಲೆಯ ವ್ಯಾಪಾರ ನಡೆಸುವ ಆಹಾರ ಉದ್ದಿಮೆದಾರರು ಹಾಗೂ ಆಹಾರ ತಯಾಕರು ಕಡ್ಡಾಯವಾಗಿ (FOSTAC) ಫುಡ್ ಸೇಫ್ಟಿ ಟ್ರೈನಿಂಗ್ ಆಂಡ್ ಸರ್ಟಿಫೀಕೇಶನ್ ಎಂಬ ತರಬೇತಿ ಮತ್ತು ಪ್ರಮಾಣಪತ್ರವನ್ನು ನೀಡಲಾಗುತ್ತಿದೆ ಎಂದು ಕಲಬುರಗಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಂಕಿತ ಅಧಿಕಾರಿ ಡಾ.ಶಿವಶರಣಪ್ಪಾ.ಎಂ.ಡಿ. ಅವರು ತಿಳಿಸಿದ್ದಾರೆ.
ವ್ಯಾಪಾರ ನಡೆಸುವ ಆಹಾರ ಉದ್ದಿಮೆದಾರರು ಹಾಗೂ ಆಹಾರ ತಯಾಕರು ಪ್ರತಿಯೊಬ್ಬರು ಕಡ್ಡಾಯವಾಗಿ ಈ ತರಬೇತಿ ಮತ್ತು ಪ್ರಮಾಣಪತ್ರವನ್ನು ಪಡೆಯಬೇಕು. ಎಫ್.ಎಸ್.ಎಸ್.ಎ.ಐ. ಶಿಫಾರಸ್ಸಿನಂತೆ ಎಲ್ಲಾ ಆಹಾರ ಉದ್ದಿಮೆದಾರರು ವ್ಯಾಪಾರ ನಡೆಸುವ ಹಾಗೂ ಆಹಾರ ತಯಾರಿಸುವ ಸ್ಥಳದಲ್ಲಿ ಕನಿಷ್ಠ 25 ಜನರಿಗೆ ಒಬ್ಬರಂತೆ ತರಬೇತಿ ಪಡೆದು ಪ್ರಮಾಣಪತ್ರ ಹೊಂದಿರುವ ಆಹಾರ ನಿರ್ವಾಹಕರು ಇರಬೇಕು.
ಉತ್ಪಾದಕತೆ, ಆದಾಯವನ್ನು ಹೆಚ್ಚಿಸಲು, ಹೆಚ್ಚಿನ ಜ್ಞಾನ ಹೊಂದಲು, ಆಹಾರ ಉದ್ಯಮದ ಭವಿಷ್ಯದ ಉನ್ನತಿಕರಿಸಲು, ಉದ್ದಿಮೆದಾರರು ತರಬೇತಿಯ ಜೊತೆಗೆ ಎಫ್.ಎಸ್.ಎಸ್.ಎ.ಐ. ಪರವಾನಗಿ/ನೋಂದಣಿ ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ https://foscos.fssai.gov.in ವೆಬ್‍ಸೈಟ್‍ನ್ನು ಸಂಪರ್ಕಿಸಲು ಕೋರಲಾಗಿದೆ.
ಇದನ್ನೂ ಓದಿ
https://suddidina.com/kuvempu-kannada-ratna-award-for-choreographer-shobha-lolanath/
ಸುದ್ದಿದಿನ.ಕಾಂ|ವಾಟ್ಸಾಪ್|9980346243