ದಿನದ ಸುದ್ದಿ
ಕಡಿಮೆ ಪಡಿತರ ಧಾನ್ಯ ವಿತರಿಸಿದರೆ ದೂರು ನೀಡಲು ಸೂಚನೆ
ಸುದ್ದಿದಿನ,ಧಾರವಾಡ : ಪಡಿತರ ಫಲಾನುಭವಿಗಳಿಗೆ ರಾಷ್ಟೀಯ ಆಹಾರ ಭದ್ರತಾ ಕಾಯ್ದೆ ಹಾಗೂ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಆಹಾರಧಾನ್ಯ ವಿತರಣೆಯನ್ನು ಮಾಡಲಾಗುತ್ತಿದೆ. ಎನ್‍ಎಫ್‍ಎಸ್‍ಎ ಅಡಿ ಪ್ರತಿ ಅಂತ್ಯೋದಯ ಪಡಿತರ ಚೀಟಿಗೆ 35 ಕೆಜಿ ಅಕ್ಕಿ ಮತ್ತು ಬಿಪಿಎಲ್ ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ 5 ಕೆಜಿಯಂತೆ ಅಕ್ಕಿಯನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ.
ಎಪ್ರಿಲ್-2022ನೇ ಮಾಹೆಯಿಂದ ಸರ್ಕಾರದಿಂದ ಗೋಧಿ ಹಂಚಿಕೆ ಸ್ಥಗಿತಗೊಳಿಸಲಾಗಿದೆ. ಕೋವಿಡ್-19 ಹಿನ್ನಲೆಯಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಅಂತ್ಯೋದಯ ಹಾಗೂ ಬಿಪಿಎಲ್ ಪಡಿತರ ಚೀಟಿ ಪ್ರತಿ ಫಲಾನುಭವಿಗಳಿಗೆ ತಲಾ 5 ಕೆಜಿಯಂತೆ ಅಕ್ಕಿಯನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ನಿಗದಿಗಿಂತ ಕಡಿಮೆ ಪ್ರಮಾಣದಲ್ಲಿ ಪಡಿತರ ಆಹಾರ ಧಾನ್ಯ ವಿತರಣೆಯಾದರೆ ಸಂಬಂಧಿಸಿದ ಪಡಿತರ ಪ್ರದೇಶ ವ್ಯಾಪ್ತಿಯ ಆಹಾರ ನಿರೀಕ್ಷಕರಿಗೆ ದೂರು ನೀಡಲು ಗ್ರಾಹಕರಿಗೆ ಸೂಚಿಸಲಾಗಿದೆ.
ಪಡಿತರ ಚೀಟಿದಾರರು ತಮ್ಮ ಪಡಿತರ ಚೀಟಿಗೆ ಅನುಗುಣವಾಗಿ ಹಂಚಿಕೆಯಾಗಿರುವ ಆಹಾರಧಾನ್ಯದ ಪ್ರಮಾಣವನ್ನು ನ್ಯಾಯಬೆಲೆ ಅಂಗಡಿಗಳಿಂದ ಪಡೆದುಕೊಳ್ಳಬೇಕು. ವಿತರಣೆಯಾಗುವ ಆಹಾರಧಾನ್ಯ ಕಡಿಮೆ ಪ್ರಮಾಣವನ್ನು ನ್ಯಾಯಬೆಲೆ ಅಂಗಡಿಕಾರರು ನೀಡಿದಲ್ಲಿ ಧಾರವಾಡ ಪಡಿತರ ಪ್ರದೇಶ-ಆಹಾರ ನಿರೀಕ್ಷಕರ-ಮೊ.ಸಂ-8088737170, ಧಾರವಾಡ ತಾಲ್ಲೂಕು-ಆಹಾರ ಶಿರಸ್ತೇದಾರ-ಮೊ.ಸಂ-9845059245, ಆಹಾರ ನಿರೀಕ್ಷಕರ-ಮೊ.ಸಂ-8310109795 ಹಾಗೂ ಅಳ್ನಾವರ ಆಹಾರ ನಿರೀಕ್ಷಕರ ಮೊ.ಸಂ-9448221892, ಹುಬ್ಬಳ್ಳಿ ಪಡಿತರ ಪ್ರದೇಶ-ಸಹಾಯಕ ನಿರ್ದೇಶಕರು-ಮೊ.ಸಂ-9611123128, ಆಹಾರ ನಿರೀಕ್ಷಕರ-ಮೊ.ಸಂ-8310490713, ಆಹಾರ ನಿರೀಕ್ಷಕರ-ಮೊ.ಸಂ-9886320360, ಹುಬ್ಬಳ್ಳಿ ತಾಲ್ಲೂಕು-ಆಹಾರ ಶಿರಸ್ತೇದಾರ-ಮೊ.ಸಂ-9035074105, ಆಹಾರ ನಿರೀಕ್ಷಕರ-ಮೊ.ಸಂ-9482532326, ಕಲಘಟಗಿ ತಾಲ್ಲೂಕ-ಆಹಾರ ನಿರೀಕ್ಷಕರ-ಮೊ.ಸಂ-9741304522, ಕುಂದಗೋಳ ತಾಲ್ಲೂಕ-ಆಹಾರ ನಿರೀಕ್ಷಕರ-ಮೊ.ಸಂ-8618525185, ನವಲಗುಂದ ತಾಲ್ಲೂಕ-ಆಹಾರ ನಿರೀಕ್ಷಕರ-ಮೊ.ಸಂ-9902142458, ಜಿಲ್ಲಾಧಿಕಾರಿಗಳ ಕಾರ್ಯಾಲಯದ ಆಹಾರ ಶಾಖೆ ದೂ.ಸಂ-0836 2444594 ದೂರವಾಣಿಗಳಿಗೆ ದೂರು ಸಲ್ಲಿಸಿದರೆ ನಿಯಮಾನುಸಾರ ಕ್ರಮಕೈಗೊಳ್ಳಲಾಗುವುದೆಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243