ದಿನದ ಸುದ್ದಿ

‘ಸ್ವಪ್ನದಲ್ಲಿ ಸೊರಗಿದ ಪ್ರೀತಿ’ ಕಾದಂಬರಿ ಲೋಕಾರ್ಪಣೆ

Published

on

ಸುದ್ದಿದಿನ ಡೆಸ್ಕ್ | ಸೋಮವಾರ (ಇಂದು) ಕೊಟ್ಟೂರಿನ ಪದವಿ ಪೂರ್ವ ಕಾಲೇಜಿನಲ್ಲಿ ಶ್ರೀಯುತ ಶ್ರೀಧರ್ ಅವರ ‘ಸ್ವಪ್ನದಲ್ಲಿ ಸೊರಗಿದ ಪ್ರೀತಿ’ ಎಂಬ ಕಾದಂಬರಿಯನ್ನು ವಾಯ್.ಜೆ.ಮಹಿಬೂಬ ಅವರ ಅಜಾದ ಪ್ರಕಾಶನದ ಸಹಯೋಗದಲ್ಲಿ, ಖ್ಯಾತ ಸಾಹಿತಿ ಕುಂಬಾರ ವೀರಭದ್ರಪ್ಪ ಅವರು ಲೋಕಾರ್ಪಣೆ ಮಾಡಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಕೃತಿಕಾರ ತಾನು ಕಂಡ ನೋವು ನಲಿವು,ಅನುಭವಿಸಿದ ತೊಂದರೆಗಳ ಪ್ರತಿರೂಪವೇ ಈ ಕೃತಿ ಎಂದು ಹೇಳಿದರು.‌ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಕುಂಬಾರ ವೀರಭದ್ರಪ್ಪ ನವರು ಕನ್ನಡ ಲೇಖಕರು ಓದುವ ಅಭಿಯಾನ ಆರಂಭಿಸಬೇಕು. ಸಾವಿರಾರು ಕೃತಿಗಳನ್ನು ಓದಿದ ನಂತರವೇ ಬರಹ ದತ್ತ ಚಿತ್ತಹರಿಸಬೇಕು ಎಂದರು.

ಕರುನಾಡ ಹಣತೆಯ ರಾಜ್ಯಾದ್ಯಕ್ಷರಾದ ರಾಜು ಸೂಲೇನಹಳ್ಳಿ ಮಾತನಾಡಿ ಕಾದಂಬರಿ ಸುತ್ತಲಿನ ಸನ್ನಿವೇಶದ ಛಾಯೆಗಳನ್ನು ತನ್ನಲ್ಲಿ ಅಳವಡಿಸಿಕೊಂಡು ಮುಂದೆ ಸಾಗಬೇಕು ಎಂದರು.

ಚಲನಚಿತ್ರ ನಿರ್ದೇಶಕ ಮತ್ತು ಪತ್ರಕರ್ತರಾದ ರಮೇಶ್ ಸುರ್ವೆ ಮಾತನಾಡಿ, ಮಣ್ಣಿನ ಮಕ್ಕಳೆ ಚಿನ್ನದ ಬೆಳೆ ಬೆಳೆಯಲು ಶಕ್ಯರು, ಅಂತಹ ಮಣ್ಣಿನ ಗುಣವನ್ನು ತನ್ನಲ್ಲಿ ಹುದುಗಿಸಿಕೊಂಡಿರುವ ಶ್ರೀಧರ್ ಅವರು ಒಂದೊಳ್ಳೆ ಕೃತಿಯನ್ನು ಸಮಾಜ ಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಇನ್ನೂ ಹಲವಾರು ಕೃತಿಗಳು ಸಮಾಜದ ಬದಲಾವಣೆಗಾಗಿ ರಚಿತವಾಗಲಿ ಎಂದರು.

ಈ ಸಮಾರಂಭದಲ್ಲಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ವೀರಭದ್ರಪ್ಪ ಅವರ ಅಧ್ಯಕ್ಷತೆವಹಿಸಿದ್ದರು. ಗೌರವ ಉಪಸ್ಥಿತಿ ಷಕೀಬ್ ಕಣದ್ಮನೆ ನವಿಲೇಹಾಳ್ ಪತ್ರಕರ್ತರು ಸುದ್ದಿದಿನ ಹಾಗೂ ವಾಯ್.ಜೆ.ಮಹಿಬೂಬ ಪ್ರಕಾಶಕರು ಅಜಾದ ಪ್ರಕಾಶನ ಸಂಸ್ಥೆ ಸಿಂದಗಿ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version