ದಿನದ ಸುದ್ದಿ
ತೇಜಸ್ವಿ ಹೆಸರಲ್ಲಿ ಕಾದಂಬರಿ ಪುರಸ್ಕಾರ
ಯುವಕರೇ ಸೇರಿ ಹೊಸ ಕನಸು ಮತ್ತು ಭರವಸೆಗಳೊಂದಿಗೆ ‘ನಿರುತ್ತರ ಪುಸ್ತಕ’ ಎಂಬ ಪ್ರಕಾಶನ ಸಂಸ್ಥೆ ಯನ್ನು ಕಟ್ಟಿದ್ದೇವೆ. ಈ ಸಂಸ್ಥೆಯ ವತಿಯಿಂದ ಕನ್ನಡಕ್ಕೆ ಅಗತ್ಯವಾದ ಪುಸ್ತಕಗಳನ್ನು ಹೊರತರಬೇಕೆಂಬ ಯೋಜನೆ ರೂಪಿಸಿಕೊಂಡಿದ್ದೇವೆ. ಇದರ ಸಲುವಾಗಿ ಮೊದಲ ಪ್ರಯತ್ನವಾಗಿ ಉತ್ತಮವಾದ ಕಾದಂಬರಿಯ ಹಸ್ತಪ್ರತಿಗೆ ‘ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಕಾದಂಬರಿ ಪುರಸ್ಕಾರ’ ವನ್ನು ಪ್ರತಿವರ್ಷ ನೀಡಬೇಕೆಂದು ತೀರ್ಮಾನಿಸಲಾಗಿದೆ. ಈ ಹಿನ್ನಲೆಯಲ್ಲಿ ಪ್ರಸ್ತುತ ವರ್ಷದ ಪುರಸ್ಕಾರಕ್ಕೆ ಕಾದಂಬರಿಯ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತಕರು ಆಗಸ್ಟ್ 15|2018 ರ ಒಳಗೆ ಕಳುಹಿಸಿಕೊಡಬೇಕಾಗಿ ವಿನಂತಿ.
ನಿಯಮಗಳು
- ಲೇಖಕರ ವಯಸ್ಸು 45 ವರ್ಷ ಮೀರಿರಬಾರದು
ಕಾದಂಬರಿಯು ಬೇರೆಲ್ಲೂ ಪ್ರಕಟವಾಗಿರಬಾರದು. - ಹಸ್ತಪ್ರತಿಯ ಯಾವ ಭಾಗದಲ್ಲೂ ಲೇಖಕರ ಹೆಸರು ಮತ್ತು ಇತರೆ ಮಾಹಿತಿಗಳನ್ನು ನಮೂದಿಸಬಾರದು.
- ಕಾದಂಬರಿಗೆ ಪುಟಗಳ ಮಿತಿ ಇರುವುದಿಲ್ಲ.
ತೀರ್ಪುಗಾರರ ತೀರ್ಮಾನವೇ ಅಂತಿಮ ತೀರ್ಮಾನ. - ತೀರ್ಪಿನ ಮಧ್ಯೆ ಯಾವುದೇ ಪತ್ರವ್ಯವಹಾರವಿರುವುದಿಲ್ಲ.
- ಕಾದಂಬರಿಯನ್ನು ನುಡಿ ತಂತ್ರಾಂಶದಲ್ಲಿ ಟೈಪಿಸಿ ಪ್ರಿಂಟೌಟ್ ತೆಗೆದು ಹಾರ್ಡ್ ಕಾಪಿ ಕಳಿಸಬೇಕು.
- ಪ್ರಶಸ್ತಿಗೆ ಆಯ್ಕೆಯಾದ ಕಾದಂಬರಿಯನ್ನು ನಿರುತ್ತರ ಪುಸ್ತಕ ಪ್ರಕಟಿಸಿರುತ್ತದೆ. ಪುರಸ್ಕಾರ ಐದು ಸಾವಿರ ನಗದು ಮತ್ತು ಫಲಕವನ್ನೊಳಗೊಂಡಿರುತ್ತದೆ.
ಕಾದಂಬರಿಯನ್ನು ಕಳುಹಿಸಬೇಕಾದ ವಿಳಾಸ
ನಿರುತ್ತರ ಪುಸ್ತಕ
ನಂ:13
ಒಂದನೇ ಮುಖ್ಯರಸ್ತೆ
ಎರಡನೇ ಅಡ್ಡರಸ್ತೆ
ಮಲ್ಲತ್ತಹಳ್ಳಿ
ಬೆಂಗಳೂರು-56
ಮಾಹಿತಿಗಾಗಿ ಸಂಪರ್ಕಿಸಿ
8495980857
9900903084