ದಿನದ ಸುದ್ದಿ

ಸಕ್ಕರೆ ನಾಡು ಮಂಡ್ಯಗೆ ನರೇಗಾ ಪ್ರಶಸ್ತಿ ಗರಿ !

Published

on

ಸುದ್ದಿದಿನ, ಮಂಡ್ಯ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗಖಾತ್ರಿ ಸಮರ್ಪಕ ಅನುಷ್ಠಾನಕ್ಕೆ ಮಂಡ್ಯ ಜಿಲ್ಲೆಗೆ ಬಾರಿಯ ನರೇಗಾ ಪ್ರಶಸ್ತಿ ಸಂದಿದೆ.

ಕೇಂದ್ರ ಸರ್ಕಾರ ಸಮರ್ಪಕವಾಗಿ ನರೇಗಾ ಯೋಜನೆ ಅನುಷ್ಠಾನ ಮಾಡಿದ ಜಿಲ್ಲೆಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಈ ಬಾರಿ ಮಂಡ್ಯ ಆಯ್ಕೆಯಾಗಿರುವುದು ಜಿಲ್ಲೆ ಜನರ ಸಂತೋಷಕ್ಕೆ ಕಾರಣವಾಗಿದೆ.

ಸ್ವಚ್ಛಭಾರತ್ ಮಿಷನ್‍ನ ಶೌಚಾಲಯ ನಿರ್ಮಾಣಕ್ಕೆ ನರೇಗಾ ಲಿಂಕ್ ಮಾಡಿದ್ದರಿಂದ ಮಂಡ್ಯ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಾಗಿ ನಿರ್ಮಾಣವಾಗಿದೆ. ಇದರಿಂದ ಕೇಂದ್ರ ಗ್ರಾಮಿಣಾಭಿವೃದ್ದಿ ಇಲಾಖೆಯಿಂದ ಮಂಡ್ಯಕ್ಕೆ ಪ್ರಶಸ್ತಿ ದೊರೆತಿದೆ.

ರಾಮನಗರಕ್ಕೆ ನರೇಗಾ ಪ್ರಶಸ್ತಿ ಗರಿ

ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗಖಾತ್ರಿ ಸಮರ್ಪಕ ಅನುಷ್ಠಾನಕ್ಕೆ ರಾಜ್ಯದ ಎರಡು ಜಿಲ್ಲೆಗಳನ್ನು ಆಯ್ಕೆ ಮಾಡಿದ್ದು, ಅದರಲ್ಲಿ ರಾಮನಗರ ಜಿಲ್ಲೆಗೂ ಸ್ಥಾನ ದೊರೆತಿದೆ. ರಾಷ್ಟ್ರೀಯ ಉದ್ಯೋಗಖಾತ್ರಿ ಯೋಜನೆ ಅನುಷ್ಠಾನದಲ್ಲಿ ರಾಮನಗ ಜಿಲ್ಲೆ ಕೂಡ ಮುಂಚೂಣಿಯಲ್ಲಿದೆ.

Leave a Reply

Your email address will not be published. Required fields are marked *

Trending

Exit mobile version