ದಿನದ ಸುದ್ದಿ
ಕಾಶ್ಮೀರ ಗಡಿಗೆ ಎನ್‍ಎಸ್‍ಜಿ ಕಾಮಾಂಡೊ ಪಡೆ
ಈ ಕಮಾಂಡೊಗಳಿಗೆ ಬಿಎಸ್‍ಎಫ್ ಕೇಂದ್ರದಲ್ಲೇ ಸೌಲಭ್ಯ ಒದಗಿಸಲಾಗುವುದು. ಈ ಕುರಿತು ಜಮ್ಮುಕಾಶ್ಮೀರ ಆಡಳಿತದ ಬಳಿ ಚರ್ಚೆ ನಡೆಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಸುದ್ದಿದಿನ ಡೆಸ್ಕ್: ದೇಶದ ವಿವಿಧ ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎನ್‍ಎಸ್‍ಜಿ ಕಮಾಂಡೊ ಪಡೆಯನ್ನು ಕಾಶ್ಮೀರ ಗಡಿಗೆ ನಿಯೋಜಿಸಬೇಕೆಂಬ ಸಲಹೆಗಳು ಕೇಳಿಬಂದಿದ್ದು, ಶೀಘ್ರವೇ ಅದು ಸಾಕಾರಗೊಳ್ಳುವ ಎಲ್ಲ ಲಕ್ಷಣಗಳು ಗೋಚರಿಸಿವೆ.
ಕಾಶ್ಮೀರದಲ್ಲಿ ಪರಿಸ್ಥಿತಿ ಒಂದೆರಡು ದಿನಗಳಲ್ಲಿ ತಹಬದಿಗೆ ಬರಲಿಲ್ಲವೆಂದರೆ ಕೂಡಲೇ ಎನ್‍ಎಸ್‍ಜಿ ಕಮಾಂಡೊಗಳನು ಪ್ರಕ್ಷುಬ್ದಪೀಡಿತ ಕಾಶ್ಮೀರದ ವಿವಿಧ ಕೇಂದ್ರಗಳಿಗೆ ನಿಯೋಜಿಸಲಾಗುವುದು ಎಂದು ಎನ್‍ಎಸ್‍ಜಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಕಮಾಂಡೊಗಳಿಗೆ ಬಿಎಸ್‍ಎಫ್ ಕೇಂದ್ರದಲ್ಲೇ ಸೌಲಭ್ಯ ಒದಗಿಸಲಾಗುವುದು. ಈ ಕುರಿತು ಜಮ್ಮುಕಾಶ್ಮೀರ ಆಡಳಿತದ ಬಳಿ ಚರ್ಚೆ ನಡೆಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಬಿಎಸ್‍ಎಫ್ ಕೇಂದ್ರದಲ್ಲಿ ಉಳಿಯುವ ಕಮಾಂಡೊಗಳೀಗೆ ಕಟ್ಟಡದೊಳಗೆ ಅವಿತಿರುವ ಉಗ್ರರನ್ನು ಸೆರೆ ಹಿಡಿಯುವುದು ಹೇಗೆ. ಉಗ್ರ ವಿರೋಧಿ ಕಾರ್ಯಾಚರಣೆ ನಡೆಸುವುದು ಹೇಗೆ, ಹಲವು ಗನ್‍ಗಳ ಬಳಕೆ ಕುರಿತು ತರಬೇತಿ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ರಂಜಾನ್ ತಿಂಗಳಲ್ಲಿ ಕಾಶ್ಮೀರದಲ್ಲಿ ರಕ್ತಪಾತ ನಡೆಯುವುದು ಬೇಡ ಎಂಬ ಕಾರಣಕ್ಕೆ ಉಗ್ರ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿತ್ತ. ಆದರೂ, ಉಗ್ರರು ಭಾರತೀಯ ಯೋಧ ಔರಂಗ್ ಜೇಬ್‍ನನ್ನು ಕೊಂದಿದ್ದಾರೆ. ಭಾರತೀಯ ಪಡೆ ಮೇಲೆ ನಡೆಯುತ್ತಿರುವ ಇಂಥ ದಾಳಿಗಳನ್ನು ನಿಯಂತ್ರಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಸದ್ಯ ಕಾಶ್ಮೀರದಲ್ಲಿ ಸರಕಾರ ಇಲ್ಲದ ಕಾರಣ, ರಾಜ್ಯಪಾಲರೇ ಇದಕ್ಕೆ ಸಮ್ಮತಿ ನೀಡಬೇಕು.