ಕ್ರೀಡೆ

ನ್ಯೂಜಿಲ್ಯಾಂಡ್ ಮಡಿಲಿಗೆ ಟೆಸ್ಟ್ ಸರಣಿ

Published

on

ಸುದ್ದಿದಿನ ಡೆಸ್ಕ್ : ಎರಡನೇ ದಿನದ ಅಂತ್ಯಕ್ಕೆ ಬಹುತೇಕ ಸೋಲಿನ ಸುಳಿಯಲ್ಲಿ ಸಿಲುಕ್ಕಿದ ಭಾರತ ಯಾವುದೇ ಪವಾಡ ವನ್ನು ಮಾಡಲಿಲ್ಲ. ನಿರೀಕ್ಷೆಯಂತೆ ಕಿವೀಸ್ ಪಡೆ ಪಂದ್ಯವನ್ನು ಗೆಲುವುದರ ಜೊತೆಗೆ ಸರಣಿಯನ್ನು 2 – 0 ಅಂತರದಲ್ಲಿ ಗೆದ್ದು ಅಮೂಲ್ಯವಾದ 120 ಪಾಯಿಂಟ್ ಗಳನ್ನು ಪಡೆದು ಟೆಸ್ಟ್ ಚಾಮ್ಪಿಯನ್ ಶಿಪ್ ನ ಫೈನಲ್ಸ್ ರೇಸ್ ನಲ್ಲಿ ಜೀವಂತವಾಗಿದೆ.

ಎರಡನೇ ದಿನದ ಅಂತ್ಯಕ್ಕೆ 90/6 ರನ್ ಗಳಿಂದ ಆಟ ಮುಗಿಸಿದ್ದ ಭಾರತ ಕೇವಲ 124 ರನ್ ಗಳಿಗೆ ಆಲ್ ಔಟ್ ಆಗುವ ಮೂಲಕ 132 ರನ್ ಗಳ ಸಾಧಾರಣ ಗುರಿ ನೀಡಿತು.

ಗುರಿ ಬೆನ್ನತ್ತಿದ ನ್ಯೂಜಿಲ್ಯಾಂಡ್ ಕೇವಲ 3 ವಿಕೆಟ್ ಗಳ ನಷ್ಟಕ್ಕೆ ಗುರಿ ತಲುಪಿ ಗೆಲುವಿನ ನಗೆ ಬೀರಿತು. ಟೆಸ್ಟ್ ಚಾಮ್ಪಿಯನ್ ಶಿಪ್ ಆರಂಭವಾದಾಗಿನಿಂದ ಭಾರತ ಸೋತ ಮೊದಲ ಸರಣಿ ಇದಾಗಿದೆ.ಕಳೆದ 8 ಸರಣಿಗಳಲ್ಲಿ ಇದೇ ಮೊದಲ ಬಾರಿಗೆ ವೈಟ್ ವಾಷ್ ಮುಖಭಂಗ ಅನುಭವಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version