ಕ್ರೀಡೆ
ಸಂತೋಷ್ ಟ್ರೋಫಿ ಫುಟ್ಬಾಲ್ ಟೂರ್ನಿ : ಗುಜರಾತ್ ಮಣಿಸಿದ ಓಡಿಶಾ
ಸುದ್ದಿದಿನ ಡೆಸ್ಕ್ : ಕೇರಳದ ಮಂಜೇರಿಯಲ್ಲಿ ನಿನ್ನೆ ರಾತ್ರಿ ನಡೆದ ಸಂತೋಷ್ ಟ್ರೋಫಿ ಫುಟ್ಬಾಲ್ ಟೂರ್ನಿಯ ಬಿ’ ಗುಂಪಿನ ಪಂದ್ಯದಲ್ಲಿ ಓಡಿಶಾ ತಂಡ 2-3 ಗೋಲುಗಳಿಂದ ಗುಜರಾತ್ ತಂಡದ ವಿರುದ್ಧ ಜಯಗಳಿಸಿ ಸೆಮಿಫೈನಲ್ ಪ್ರವೇಶಿಸಿತು.
ಇದಕ್ಕೂ ಮುನ್ನ ಮಲಪ್ಪುರಂನ ಕೊಟ್ಟಪಾಡಿ ಕ್ರೀಡಾಂಗಣದಲ್ಲಿ ನಡೆದ ಬಿ’ ಗುಂಪಿನ ಮತ್ತೊಂದು ಪಂದ್ಯದಲ್ಲಿ ಮಣಿಪುರ ತಂಡ 3-0ಗೋಲುಗಳಿಂದ ಕರ್ನಾಟಕ ತಂಡದ ವಿರುದ್ಧ ಗೆಲುವು ದಾಖಲಿಸಿ ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶ ಪಡೆಯಿತು.
ಇಂದು ಕೊಟ್ಟಪಾಡಿ ಕ್ರೀಡಾಂಗಣದಲ್ಲಿ ಸಂಜೆ 4ಗಂಟೆಗೆ ನಡೆಯಲಿರುವ ಪಂದ್ಯದಲ್ಲಿ ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳ ಹಾಗೂ ರಾತ್ರಿ 4 ಗಂಟೆಗೆ ಪಯಾಂಡ್‌ನಲ್ಲಿ ನಡೆಯಲಿರುವ ಮತ್ತೊಂದು ಪಂದ್ಯದಲ್ಲಿ ಮೇಘಾಲಯ ಮತ್ತು ಪಂಜಾಬ್ ತಂಡಗಳು ಸೆಣಸಲಿವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243