ದಿನದ ಸುದ್ದಿ
ಒಡಿಶಾ, ಕೇರಳ ಮತ್ತು ಉತ್ತರಾಖಂಡ ; ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ವೇಳಾಪಟ್ಟಿ ಪ್ರಕಟ
ಸುದ್ದಿದಿನ ಡೆಸ್ಕ್ : ಒಡಿಶಾ, ಕೇರಳ ಮತ್ತು ಉತ್ತರಾಖಂಡದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಯ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿದೆ.
ಒಡಿಶಾದ ಬ್ರಜರಾಜನಗರಕ್ಷೇತ್ರ, ಕೇರಳದ ತೃಕ್ಕಕರ ಕ್ಷೇತ್ರ ಮತ್ತು ಉತ್ತರಾಖಂಡದ ಚಂಪಾವತ್ ಕ್ಷೇತ್ರಕ್ಕೆ ಇದೇ ತಿಂಗಳ 31ರಂದು ಉಪಚುನಾವಣೆ ನಡೆಯಲಿದೆ. ಮುಂದಿನ ತಿಂಗಳು 3 ರಂದು ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ನಾಳೆ ಚುನಾವಣೆಗೆ ಗೆಜೆಟ್ ಅಧಿಸೂಚನೆ ಹೊರಬೀಳಲಿದ್ದು, ಈ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಲು ಮೇ 11 ಕೊನೆಯ ದಿನವಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243