ದಿನದ ಸುದ್ದಿ
ಎಣ್ಣೆ ಲಾರಿಗೆ ಮುಗಿಬಿದ್ದ ಜನ; ಲಾಠಿ ಬಿಸಿ ತೋರಿಸಿದ ಪೊಲೀಸರು
ಸುದ್ದಿದಿನ ಡೆಸ್ಕ್
ದಾವಣಗೆರೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಲ್ಟಿ ಹೊಡೆದ ಟ್ಯಾಂಕರ್ ನಿಂದ ಸೋರುತ್ತಿದ್ದ ಅಡುಗೆ ಎಣ್ಣೆ ತುಂಬಿಕೊಳ್ಳಲು ಜನರು ಮುಗಿಬಿದ್ದಿದ್ದರು. ಇದರಿಂದ ಬೆಳಗ್ಗೆಯೇ ಹೆದ್ದಾರಿ ಸಮೀಪದ ನಿವಾಸಿಗಳಿಗೆ ಹಬ್ಬ ಸಂಭ್ರಮ ಮೂಡಿತ್ತು.
ಮಹಾರಾಷ್ಟ್ರ ಮೂಲದ ಲಾರಿಯೊಂದು ಉತ್ತರಪ್ರದೇಶದಿಂದ ಸೊಲ್ಲಾಪುರಕ್ಕೆ ಅಡುಗೆ ಎಣ್ಣೆ ಸಾಗಣೆ ಮಾಡುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಲಾರಿ ಹೆದ್ದಾರಿಯಲ್ಲಿ ಪಲ್ಟಿ ಹೊಡೆದಿದೆ. ಎಣ್ಣೆ ತುಂಬಿದ್ದ ಲಾರಿ ಬುಧವಾರ ಬೆಳಗ್ಗೆ ಪಲ್ಟಿ ಹೊಡೆದಿದ್ದರಿಂದ ಸಂತೋಷಕ್ಕೆ ಎಲ್ಲೆ ಇರಲಿಲ್ಲ. ಸಣ್ಣವರು, ದೊಡ್ಡವರು, ವೃದ್ಧರು, ಮಹಿಳೆಯರು, ಮಕ್ಕಳು, ಯುವಕ- ಯುವತಿಯರು ಕೊಡ, ಕ್ಯಾನಿನಲ್ಲಿ ಎಣ್ಣೆ ಭರ್ತಿ ಮಾಡಿಕೊಂಡು ಮನೆಗೆ ಹೋಗುತ್ತಿದ್ದರು.
ಲಾರಿ ಪಲ್ಟಿ ಹೊಡೆದಿದ್ದರಿಂದ ಚಾಲಕ ಇತರರು ಗಾಯಗೊಂಡಿದ್ದಾರೆ. ಗಾಯಗೊಂಡವರು ಚಿಕಿತ್ಸೆ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ದಾವಣಗೆರೆ ದಕ್ಷಿಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401