ದಿನದ ಸುದ್ದಿ
ಅಸಭ್ಯ ವರ್ತನೆ ಓಲಾ ಕ್ಯಾಬ್ ಚಾಲಕನ ಸೆರೆ
ಸುದ್ದಿದಿನ ಡೆಸ್ಕ್: ಯುವತಿಯೊಬ್ಬರ ಜತೆ ಅಸಭ್ಯವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಓಲಾ ಕ್ಯಾಬ್ ಡ್ರೈವರ್‍ವೊಬ್ಬನನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮಹದೇವ್ ಬಂಧನಕ್ಕೊಳಗಾದ ಚಾಲಕ. ದೂರು ನೀಡಿರುವ ಯುವತಿಯು ಕೆಜಿ ರೋಡ್‍ನಿಂದ ಮಲ್ಲೇಶ್ವರಂಗೆ ಕ್ಯಾಬ್ ಬುಕ್ ಮಾಡಿದ್ದರು.
ಬುಕ್ ಮಾಡಿದ ಮರುನಿಮಿಷದಿಂದಲೇ ವೇಯ್ಟಿಂಗ್ ಚಾರ್ಜ್ ಶುರುವಾಯಿತು. ಕ್ಯಾಬ್ ಹತ್ತುವ ಮುನ್ನವೇ ವೇಯ್ಟಿಂಗ್ ಚಾರ್ಜ್ ಹೇಗೆ ಶುರುವಾಯಿತು ಎಂದು ಯುವತಿ ಫೋನ್ ಮಾಡಿ ಪ್ರಶ್ನಿಸಿದಾಗ ಚಾಲಕ ಬೈದಿದ್ದಾನೆ. ಯುವತಿ ಹಾಗೂ ಆಕೆ ತಾಯಿ ಇದ್ದಲ್ಲಿಗೆ ಬಂದ ಚಾಲಕ, ಯುವತಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಚಪ್ಪಲಿಯಲ್ಲಿ ಹೊಡೆಯಲು ಮುಂದಾಗಿದ್ದಾನೆ. ಸುತ್ತಮುತ್ತಲಿನ ಜನರು ಆತನನ್ನು ತಡೆದರು. ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಯುವತಿ ನೀಡಿದ ದೂರಿನ ಅನ್ವಯ ಚಾಲಕನನ್ನು ಬಂಧಿಸಲಾಗಿದೆ.