ದಿನದ ಸುದ್ದಿ
ಹಳೆಯ ಸಾವಿರ, ಐನೂರು ರೂ ನೋಟಿಗೆ ಬೆಂಕಿಯಿಟ್ಟರು..!
ಸುದ್ದಿದಿನ,ರಾಯಚೂರು : ನಿಷೇಧಕ್ಕೊಳಪಟ್ಟ ಹಳೆಯ ಸಾವಿರ, ಐದು ನೂರು ರೂಪಾಯಿ ನೋಟುಗಳನ್ನು ಕಸ ಸುಡುವ ಸ್ಥಳದಲ್ಲಿ ಬೆಂಕಿ ಹಚ್ಚಿ ಸುಟ್ಟಿರುವ ಘಟನೆ ರಾಯಚೂರು ನಗರದ ರಾಜೇಂದ್ರ ಗಂಜ್ ಹಿಂಭಾಗದಲ್ಲಿ ನಡೆದಿದೆ.
ಪರಿಣಾಮ ಲಕ್ಷಾಂತರ ಮೌಲ್ಯದ ಹಳೆಯ ನೋಟು ಭಸ್ಮವಾಗುದ್ದು, ನೋಟಿಗೆ ಬೆಂಕಿ ಹಚ್ಚಿ ಸುಟ್ಟವರ ಬಗ್ಗೆ ಸ್ಪಷ್ಟ ಮಾಹಿತಿ ದೊರೆತಿಲ್ಲ. ಈ ಹಣ ಗಂಜ್ ವ್ಯಾಪ್ತಿಯ ವರ್ತಕರೊಬ್ಬರ ಹಣ ಎನ್ನಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401