ದಿನದ ಸುದ್ದಿ
ಈ ವರ್ಷ ಮೇ-ಜೂನ್ ನಡುವೆ ಶೇಕಡ 99ರಷ್ಟು ಸೋಂಕಿಗೆ ಒಮಿಕ್ರಾನ್ ವೈರಾಣು ಕಾರಣ : ಡಾ. ಕೆ. ಸುಧಾಕರ್
ಸುದ್ದಿದಿನ ಡೆಸ್ಕ್ : ಜಿನೊಮ್ ಸಿಕ್ವೇನ್ಸಿಂಗ್ ಮಾದರಿಗಳ ಪ್ರಕಾರ ಈ ವರ್ಷ ಮೇ-ಜೂನ್ ನಡುವೆ ಶೇಕಡ 99 ರಷ್ಟು ಸೋಂಕಿಗೆ ಒಮಿಕ್ರಾನ್ ವೈರಾಣು ಕಾರಣವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಚಿವರು, ಮಾರ್ಚ್ 2021ರಿಂದ ಡಿಸೆಂಬರ್ 2021ರವರೆಗೆ ಶೇಕಡ 90.7ರಷ್ಟು ಸೋಂಕಿಗೆ ಡೆಲ್ಟಾ ಕಾರಣವಾದರೆ ಈ ವರ್ಷದ ಆರಂಭದಿಂದ ಏಪ್ರಿಲ್ ತಿಂಗಳವರೆಗೆ ಶೇಕಡ 98.80ರಷ್ಟು ಸೋಂಕಿಗೆ ಒಮಿಕ್ರಾನ್ ಕಾರಣವಾಗಿದೆ.
ಮೇ 2022ರಿಂದ ಜೂನ್ 2022ರವರೆಗೆ ಶೇಕಡಾ ೯೯ರಷ್ಟು ಸೋಂಕಿಗೆ ಒಮಿಕ್ರಾನ್ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ. ಪ್ರಸ್ತುತ ಬಿಎ 1.1.529ಮತ್ತು ಬಿಎ 1 ಕ್ರಮವಾಗಿ ಶೇಕಡ8.60 ಮತ್ತು ಶೇಕಡ 0.04ಕ್ಕೆ ಕುಸಿದಿದ್ದು, ಮೇ ತಿಂಗಳಿನಿಂದ ಬಿಎ2 ರೂಪಾಂತರ ಶೇಕಡಾ 80.60 ರಿಂದ ಶೇಕಡಾ 89.40ಕ್ಕೆ ಏರಿಕೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243