ದಿನದ ಸುದ್ದಿ

ವಿಡಿಯೋ | ರಾಗಿ ಹುಲ್ಲಿಗೆ ಸಿಲುಕಿದ ‘ಓಮಿನಿ’ಗೆ ದಿಢೀರ್ ಬೆಂಕಿ

Published

on

ಸುದ್ದಿದಿನ, ಹೊಸದುರ್ಗ : ರಸ್ತೆ ಮೇಲೆ ಹಾಕಿ ಒಕ್ಕಲು ಮಾಡುತ್ತಿದ್ದ ರಾಗಿ ಹುಲ್ಲಿಗೆ ಸಿಲುಕಿದ ಓಮಿನಿಯಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಭಸ್ಮವಾಗಿರುವ ಘಟನೆ, ಹೊಸದುರ್ಗ ತಾಲೂಕಿನ ಕಂಚೀಪುರ ಗ್ರಾಮದ ಹೊರವಲಯದ ಶ್ರೀರಾಂಪುರ ರಸ್ತೆಯಲ್ಲಿ ನಡೆದಿದೆ.

ಭಾನುವಾರ ಮುಂಜಾನೆ ಸಂಭವಿಸಿದ ಘಟನೆಯಲ್ಲಿ ಓಮಿನಿ, ರೈತರ ರಾಗಿ ಸಹಿತ ಹುಲ್ಲು ಭಸ್ಮವಾಗಿದೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಶ್ರೀರಾಂಪುರ ಮೂಲದ ಓಮಿನಿ ಕಂಚೀಪುರದತ್ತ ತೆರಳುತ್ತಿತ್ತು ಎನ್ನಲಾಗಿದೆ.ಶ್ರೀರಾಂಪುರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version