ದಿನದ ಸುದ್ದಿ
ಏ.29 ರಂದು ನಿರುಪಯುಕ್ತ ವಾಹನ ಬಹಿರಂಗ ಹರಾಜು
ಸುದ್ದಿದಿನ,ಚಿತ್ರದುರ್ಗ : ಚಿತ್ರದುರ್ಗ ಜಿಲ್ಲಾ ಕಾರಾಗೃಹದಲ್ಲಿರುವ ನಿರುಪಯುಕ್ತ ಮಾರುತಿ ಓಮಿನಿ ಆಂಬ್ಯುಲೆನ್ಸ್ ಹಾಗೂ ರಾಯಲ್ ಎನ್ ಫೀಲ್ಡ್ ಮೋಟಾರ್ ಸೈಕಲ್‍ಗಳನ್ನು ಇದೇ ಏಪ್ರಿಲ್ 29 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಕಾರಾಗೃಹದ ಆವರಣದಲ್ಲಿ ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು.
ಆಸಕ್ತರು ರೂ.500/- ಬಿಡ್ ಶುಲ್ಕ ಪಾವತಿಸಿ, ಪ್ರತಿ ವಾಹನಗಳಿಗೆ ರೂ.5000/- ರೂಪಾಯಿಗಳ ನಗದು ಠೇವಣಿ ಇರಿಸಿ ಹರಾಜಿನಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9480806472 ಹಾಗೂ ಇ ಮೇಲ್ ವಿಳಾಸ dpcdr.prisons-kar@gov.in
ಸಂಪರ್ಕಿಸಬಹುದು ಎಂದು ಜಿಲ್ಲಾ ಕಾರಾಗೃಹ ಅಧೀಕ್ಷಕರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243