ದಿನದ ಸುದ್ದಿ
ಒಂದು ದೇಶ ಒಂದು ಆಕಾಶವಾಣಿ ನೀತಿ, ಪ್ರಸಾರ ಭಾರತಿ ಹೊಂದಿಲ್ಲ : ಅನುರಾಗ್ ಸಿಂಗ್ ಠಾಕೂರ
ಸುದ್ದಿದಿನ ಡೆಸ್ಕ್ : ’ಒಂದು ದೇಶ ಒಂದು ಆಕಾಶವಾಣಿ’ ನೀತಿಯನ್ನು ಪ್ರಸಾರ ಭಾರತಿ ಹೊಂದಿಲ್ಲ ಎಂದು ಕೇಂದ್ರ ಪ್ರಸಾರ ಮತ್ತು ಮಾಹಿತಿ ಸಚಿವ ಅನುರಾಗ್ ಸಿಂಗ್ ಠಾಕೂರ್ ಹೇಳಿದ್ದಾರೆ.
ಈ ಕುರಿತು ಲೋಕಸಭೆಯಲ್ಲಿಂದು ಲಿಖಿತ ಉತ್ತರ ನೀಡಿರುವ ಅವರು, ಆಕಾಶವಾಣಿ ಯಾವುದೇ ಪ್ರಸಾರ ಕೇಂದ್ರಗಳನ್ನು ಸ್ಥಗಿತಗೊಳಿಸುವ ಉದ್ದೇಶ ಹೊಂದಿಲ್ಲ. ವಿವಿಧಭಾರತಿ ಮೂಲಕ ಕಾರ್ಯಕ್ರಮಗಳು ಪ್ರಸಾರವಾಗಲಿದೆ ಎಂದು ತಿಳಿಸಿದ್ದಾರೆ.
ಆಕಾಶವಾಣಿ, ಜಗತ್ತಿನೆಲ್ಲೆಡೆ ಇರುವ ತನ್ನ ಶ್ರೋತೃಗಳಿಗೆ ಸೇವೆ ಪ್ರಸಾರ ಮಾಡಲೂ ಹಲವು ಕ್ರಮಗಳನ್ನು ಕೈಗೊಂಡಿದೆ. ಆಕಾಶವಾಣಿ ಸದ್ಯ 23 ಭಾಷೆಗಳಲ್ಲಿ ದೇಶದ 501 ಕೇಂದ್ರಗಳಿಂದ ತನ್ನ ಸೇವೆ ಪ್ರಸಾರ ಮಾಡುತ್ತಿದೆ ಎಂದು ಹೇಳಿದ್ದಾರೆ.
ವಿವಿಧಭಾರತಿ ರಾಷ್ಟ್ರೀಯ ಸೇವೆ ಸೇರಿದಂತೆ 280ಕ್ಕೂ ಅಧಿಕ ವಾಹಿನಿಗಳು ಕಾರ್ಯ ನಿರ್ವಹಿಸುತ್ತಿದೆ ಅದರಲ್ಲಿ ಪ್ರಮುಖವಾಗಿ ಎಫ್‌ಎಂ ರೈನ್‌ಬೋ, ಎಫ್‌ಎಂ ಗೋಲ್ಡ್ ಸೇರಿದಂತೆ ಹಲವು ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ಇದರ ಜೊತೆಗೆ ನ್ಯೂಸ್ ಆನ್ ಏರ್ ಆಪ್ ಮೂಲಕವೂ ವಿಶ್ವದಾದ್ಯಂತ ಸುದ್ದಿಗಳನ್ನು ಬಿತ್ತರಿಸುತ್ತಿವೆ ಎಂದು ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243