ರಾಜಕೀಯ

ಒನ್ ನೇಷನ್, ಒನ್ ಎಲೆಕ್ಷನ್’ ; ತರಳಬಾಳು ಜಗದ್ಗುರು ಪರೋಕ್ಷ ಸಹಮತ

Published

on

ಸುದ್ದಿದಿನ ಚಿತ್ರದುರ್ಗ: ಪ್ರಧಾನಿ ಮೋದಿ ಅವರ ‘ಒನ್ ನೇಷನ್, ಒನ್ ಎಲೆಕ್ಷನ್’ ಪರಿಕಲ್ಪನೆಗೆ ಸಹಮತ ವ್ಯಕ್ತಪಡಿಸಿರುವ ಸಿರಿಗೆರೆ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಐದು ವರ್ಷಗಳಲ್ಲಿ ಚುನಾವಣೆ ಮೇಲೆ ಚುನಾವಣೆ ನಡೆಯುತ್ತಿವೆ. ಇದರಿಂದ ಸರ್ಕಾರ ಅಭಿವೃದ್ಧಿ ಕೆಲಸಗಳನ್ನು ಮಾಡಲು ಪುರೋಸುತ್ತಿಲ್ಲ. ಆದ್ದರಿಂದ ಏಕಕಾಲದಲ್ಲಿ ಕೇಂದ್ರ, ರಾಜ್ಯಗಳಲ್ಲಿ ಚುನಾವಣೆ ನಡೆಸಲಿ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಅತೃಪ್ತ ಶಾಸಕರು ಸಿದ್ದು ಭೇಟಿ ಮಾಡಿದ್ದಾದ್ರೂ ಏಕೆ.? ಇಲ್ಲಿದೆ ಅದರ ಕಂಪ್ಲೀಟ್ ಡೀಟೆಲ್ಸ್ ಓದಿ..!

ತಾಲೂಕಿನ ಸಿರಿಗೆರೆ ಗ್ರಾಮದ ತರಳಬಾಳು ಬೃಹನ್ಮಠದಲ್ಲಿ ಆಯೋಜಿಸಿದ್ದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿ ಶ್ರದ್ಧಾಂಜಲಿ ಸಮಾರಂಭದ ಕೊನೆಯ ದಿನದ ಸಮಾರಂಭದಲ್ಲಿ ಮಾತನಾಡಿ, ಮಧ್ಯಾಂತರ ಅವಧಿಯಲ್ಲಿ ಯಾರಾದರೂ ರಾಜೀನಾಮೆ ನೀಡಿದರೆ ಮತ್ತೊಮ್ಮೆ ಚುನಾವಣೆ ನಡೆಸಬಾರದು. ಅದರ ಬದಲು ಎರಡನೇ ಅತ್ಯಧಿಕ ಮತ ಪಡೆದ ಸ್ಪರ್ಧಿಯನ್ನು ಆಯ್ಕೆ ಮಾಡಿ ಉಳಿದ ಅವಧಿ ವರೆಗೂ ಶಾಸಕರಾಗಿ ಮುಂದುರಿಸುವಂತೆ ಸಲಹೆ ನೀಡಿದ್ದಾರೆ.

Trending

Exit mobile version