ದಿನದ ಸುದ್ದಿ
ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದಿಂದ ಅರ್ಜಿ ಆಹ್ವಾನ
ಸುದ್ದಿದಿನ,ಮೈಸೂರು : 2020-21ನೇ ಸಾಲಿನಲ್ಲಿ ಅಲೆಮಾರಿ, ಅರೆ ಅಲೆಮಾರಿ ಜನಾಂಗಕ್ಕೆ ಸೇರಿದ ಬೈರಾಗಿ (ಬಾವ), ಬಾಲ ಸಂತೋಷಿ-ಜೋಷಿ, ಬಾಜಿಗರ್, ಭರಡಿ, ಬುಡಬುಡಕಿ, ಜೋಷಿ, ಗೋಂಧಳಿ, ಚಾರ, ಚಿತ್ರಕಥಿ, ಜೋಷಿ, ಧೋಲಿ, ಢವೇರಿ, ದೊಂಬರಿ, ಘಿಸಾಡಿ, ಗರುಡಿ, ಗೋಪಾಲ್, ಗೊಂದಳಿ, ಹೆಳವ, ಜೋಗಿ, ಕೇಲ್ಕರಿ, ಕೋಲ್ಹಟಿ, ನಂದಿವಾಲ-ಜೋಷಿ-ಗೊಂದಳಿ, ಪುಲ್‍ಮಾಲ್ಲಿ.
ನಾಥಪಂಥಿ-ಡೌರಿ-ಗೋಸಾವಿ, ನಿರ್ಶಿಕಾರಿ, ಪಾಂಗ್ಯುಯಲ್, ಜೋಷಿ, (ಸಾದ ಜೋಷಿ), ಸಾನ್ಸಿಯ, ಸರಾನಿಯ, ತಿರುಮಲಿ, ವಾಯ್ಡು, ವಾಸುದೇವ್, ವಾಡಿ, ವಗ್ರಿ, ವಿರ್, ಬಜನಿಯ, ಶಿಕ್ಕಲಿಗರ್, ಗೊಲ್ಲ, ಕಿಲ್ಲಿಕ್ಯಾತನ್, ಸರೋಡಿ, ದುರ್ಗ-ಮುರ್ಗ (ಬುರ್‍ಬುರ್‍ಚ), ಹಾವಗಾರ್ (ಹಾವಾಡಿಗಾರ್), ಪಿಚಗುಂಟಲ, ಮಸಣಿಯ ಯೋಗಿ, (ಬೆಸ್ತರ್) ಬುಂಡೆಬೆಸ್ತ, ಕಟಬು, ದರ್ವೇಶ್, ಕಾಶಿ ಕಪಾಡಿ.
ದೊಂಬಿದಾಸ ಮತ್ತು ಬೈಲ್ ಪತರ್ ಜನರ ಆರ್ಥಿಕ ಅಭಿವೃದ್ಧಿಗಾಗಿ ಸ್ವಯಂ ಉದ್ಯೋಗ ಸಾಲ ಯೋಜನೆ, ಸ್ವ-ಸಹಾಯ ಗುಂಪುಗಳ ಮೂಲಕ ಸಾಲ ಮತ್ತು ಸಹಾಯಧನ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆ, ಗಂಗಾ ಕಲ್ಯಾಣ ನೀರಾವರಿ ಯೋಜನೆ, ಭೂಖರೀದಿ ಯೋಜನೆ ಮತ್ತು ಬ್ಯಾಂಕ್‍ಗಳ ಸಹಯೋಗದೊಂದಿಗೆ ಸಾಲ ಮತ್ತು ಸಹಾಯಧನ ಸೌಲಭ್ಯ ಪಡೆಯಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತರು ಉಚಿತವಾಗಿ ಅರ್ಜಿ ನಮೂನೆಯನ್ನು ಜಿಲ್ಲಾ ಕಚೇರಿಗಳಲ್ಲಿ ಅಥವಾ ನಿಗಮದ ವೆಬ್‍ಸೈಟ್ dbcdc.karnataka.gov.in ನಲ್ಲಿ ಪಡೆದು, ಅಗತ್ಯ ದಾಖಲಾತಿಗಳೊಂದಿಗೆ ಆಯಾ ಜಿಲ್ಲೆಯ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಗೆ ಆಕ್ಟೋಬರ್ 29 ರೊಳಗೆ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಮೈಸೂರು ಜಿಲ್ಲಾ ಕಚೇರಿಯ ದೂರವಾಣಿ ಸಂಖ್ಯೆ:- 0821-2341194 ಅಥವಾ ನಿಗಮದ ವೆಬ್‍ಸೈಟ್ dbcdc.karnataka.gov.in ಅನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243