ದಿನದ ಸುದ್ದಿ
ಕುರಿ-ಮೇಕೆ ಪಡೆಯಲು ಅರ್ಜಿ ಆಹ್ವಾನ
ಸುದ್ದಿದಿನ,ಬಳ್ಳಾರಿ/ಹೊಸಪೇಟೆ: ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತದಿಂದ ಪರಿಶಿಷ್ಟ ವರ್ಗದ ಮಹಿಳೆಯರಿಗೆ ಕುರಿ/ಮೇಕೆ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2020-21ನೇ ಪ್ರಸಕ್ತ ಸಾಲಿನ ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆ ಅಡಿಯಲ್ಲಿ ನಿಗಮದಲ್ಲಿ ಸದಸ್ಯತ್ವ ಹೊಂದಿದ ಮಹಿಳಾ ಸದಸ್ಯರಿಗೆ ಕುರಿ/ಮೇಕೆ (6+1) ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ವಿಶೇಷ ಘಟಕ ಯೋಜನೆ ಅಡಿಯಲ್ಲಿ 11 ಕುರಿ ಘಟಕಗಳು, 06 ಮೇಕೆ ಘಟಕಗಳನ್ನೊಳಗೊಂಡ ಒಟ್ಟು 17 ಘಟಕಗಳು ಹಾಗೂ ಗಿರಿಜನ ಉಪಯೋಜನೆ ಅಡಿಯಲ್ಲಿ 05 ಕುರಿ ಘಟಕಗಳು ಹಾಗೂ 02 ಮೇಕೆ ಘಟಕ ಸೇರಿದಂತೆ ಒಟ್ಟು 07 ಘಟಕಗಳ ಗುರಿ ಹೊಂದಿದೆ.
ಅರ್ಜಿ ಸಲ್ಲಿಸುವವರು ನಿಗಮದ ಸದಸ್ಯರಾಗಿರಬೇಕು, ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡ ಪ್ರವರ್ಗಕ್ಕೆ ಸೇರಿದವರಾಗಿರಬೇಕು, 18-60 ವರ್ಷ ವಯೋಮಿತಿಯಾಗಿರಬೇಕು, ಯೋಜನೆಗೆ ಮಹಿಳಾ ಸದಸ್ಯರು ಲಭ್ಯವಿಲ್ಲದಿದ್ದಲ್ಲಿ ಪುರುಷ ಸದಸ್ಯರುಗಳನ್ನು ಅಥವಾ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳು ಇಲ್ಲದೇ ಇರುವ ತಾಲ್ಲೂಕುಗಳಲ್ಲಿ ಕುರಿ ಸಾಕಾಣಿಕೆದಾರರುಗಳನ್ನು ಫಲಾನುಭವಿಗಳನ್ನಾಗಿ ಜಿಲ್ಲಾ ಆಯ್ಕೆ ಸಮಿತಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಫಲಾನುಭವಿಗಳ ಹಿನ್ನಲೆಯಲ್ಲಿ, ಜಿಲ್ಲಾದ್ಯಂತ ಎಲ್ಲಾ ತಾಲ್ಲೂಕುಗಳಿಗೆ ಗುರಿ ನಿಗದಿಪಡಿಸಲಾಗಿದ್ದು, ಆಸಕ್ತ ಅರ್ಹ ಅರ್ಜಿದಾರರು ತಮ್ಮ ದಾಖಲಾತಿಗಳೊಂದಿಗೆ ಇದೇ ತಿಂಗಳ ಆ.15ರೊಳಗಾಗಿ ಹೊಸಪೇಟೆ ತಾಲ್ಲೂಕು ಪಶು ಆಸ್ಪತ್ರೆಗಳಲ್ಲಿ ಸಲ್ಲಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243