ದಿನದ ಸುದ್ದಿ

ವಿದ್ಯಾರ್ಥಿಗಳಿಗೆ ಆನ್ಲೈನ್ ಪಾಠ ಸೂಕ್ತವಲ್ಲ

Published

on

ಕೊರೊನಾದಿಂದ ಎಲ್ಲವುದಕ್ಕೂ ತೊಂದರೆ ಯಾಗಿರುವುದು ನಮಗೆಲ್ಲ ತಿಳಿದಿರುವ ವಿಷಯ ಹಾಗೆಯೇ ಶಿಕ್ಷಣ ವಲಯಕ್ಕೆ ಇದರಿಂದ ತೊಂದರೆ ಉಂಟಾಗಿದೆ. ಇದಕ್ಕೆ ಶಿಕ್ಷಣ ಸಂಸ್ಥೆಯು ಆನ್ಲೈನ್ ಮೂಲಕ ವಿದ್ಯಾರ್ಥಿಗಳಿಗೆ ಪಾಠವನ್ನು ಹೇಳಿಕೊಡಲು ಆರಂಭಿಸಿದ್ದಾರೆ ಆದರೆ ಇದು ಸರಿಯಾದ ನಿರ್ಧಾರ ಅಲ್ಲ ಏಕೆಂದರೆ ಅನೇಕ ಮಕ್ಕಳಿಗೆ ಆನ್ಲೈನ್ ಪಾಠವು ಅರ್ಥವಾಗುತ್ತಿಲ್ಲ.

ಇನ್ನೂ ಕೆಲವರಿಗೆ ತಂತ್ರಜ್ಞಾನದ ಕೊರತೆಯಿಂದ ಮತ್ತು ಇಂಟರ್ನೆಟ್ ಕೊರತೆಯಿಂದ ಪಾಠವು ಅರ್ಥವಾಗದೇ ವಿದ್ಯಾರ್ಥಿಗಳು ಕಷ್ಟಪಡುತ್ತಿದ್ದಾರೆ. ಇನ್ನು ಆನ್ಲೈನ್ ಮೂಲಕ ಪಾಠವು ನಿರಂತರವಾಗಿ ಕೇಳಿದರೆ ವಿದ್ಯಾರ್ಥಿಗಳ ಆರೋಗ್ಯಕ್ಕೆ ಪರಿಣಾಮ ಇರುವುದು ಎನ್ನುತ್ತಾರೆ ಕೆಲವು ವೈದ್ಯರು.

ಸರ್ಕಾರವು ಮೊದಲು ಮಕ್ಕಳಿಗೆ ಪಾಠ ಅರ್ಥವಾಗಿದೆ ಅಥವಾ ಇಲ್ಲವಾ ಎಂದು ಪರಿಗಣಿಸಿ ನಂತರ ಪರೀಕ್ಷೆಯನ್ನು ಯಾವಾಗ ಮಾಡಬೇಕು ಎನ್ನುವ ನಿರ್ಧಾರವನ್ನು ಕೈಗೆತ್ತಿಕೊಳ್ಳಬೇಕು. ಇದರಲ್ಲಿ ಲಕ್ಷಾಂತರ ಮಕ್ಕಳ ಭವಿಷ್ಯ ವಿರುವುದರಿಂದ ಎಲ್ಲಾ ರೀತಿಯ ಪರಿಣಾಮವನ್ನು ಯೋಚಿಸಿ ನಂತರ ಕ್ರಮ ಕೈಗೊಳ್ಳಬೇಕು.

ಆನ್ಲೈನಲ್ಲಿ ಪಾಠ ಮಾಡಿರುವುದರಿಂದ ವಿದ್ಯಾರ್ಥಿಗಳು ಆನ್ಲೈನ್ನಲ್ಲಿ ಪರೀಕ್ಷೆಯನ್ನು ಸಹ ಮಾಡಿ ಎಂದು ಹೇಳುತ್ತಿದ್ದಾರೆ ಇದರ ಬಗ್ಗೆಯೂ ಕೂಡ ಸರ್ಕಾರ ಯೋಚಿಸಬೇಕು. ಕೆಲವು ವಿದ್ಯಾರ್ಥಿಗಳು ಕಾಲೇಜಿಗೆ ಫೀಸ್ ಅನ್ನು ಕಟ್ಟಿ ಮತ್ತು ಆನ್ಲೈನ್ ಅಲ್ಲಿ ನಡೆಯುವ ಪಾಠಕ್ಕೆ ತಮ್ಮ ಕೈಯಿಂದಲೇ ಇಂಟರ್ನೆಟ್ನ ವ್ಯವಸ್ಥೆಯನ್ನು ಮಾಡಿಕೊಂಡು ಕಷ್ಟಪಡುತ್ತಿದ್ದಾರೆ ಆದ್ದರಿಂದ ಅವರು ತಮ್ಮ ಕಾಲೇಜು ಫೀಸ್ ಅನ್ನು ನಮಗೆ ವಾಪಸ್ ಕೊಡಿ ಎಂದು ಹೇಳುತ್ತಿದ್ದಾರೆ.

ಆದುದರಿಂದ ಸರ್ಕಾರ ವಿದ್ಯಾರ್ಥಿಗಳಿಗೆ ಇಂಟರ್ನೆಟ್ ವ್ಯವಸ್ಥೆಯ ನ್ನಾದರೂ ಉಚಿತವಾಗಿ ಮಾಡಿಕೊಡಬೇಕಾಗಿದೆ. ಶಿಕ್ಷಣ ಇಲಾಖೆಯು ಇದನ್ನು ಗಮನಿಸಿ ಒಂದು ಸೂಕ್ತವಾದ ವ್ಯವಸ್ಥೆಯನ್ನು ಮಾಡಬೇಕಾಗಿದೆ. ಇದರ ಜೊತೆ ಬಹುಮುಖ್ಯವಾಗಿ ಆನ್ಲೈನ್ ಪಾಠವು ಎಲ್ಲರಿಗೂ ಸಿಗುತ್ತಿಲ್ಲ. ಹಳ್ಳಿಯಲ್ಲಿರುವ ಅನೇಕ ಬಡ ವಿದ್ಯಾರ್ಥಿಗಳಿಗೆ ನೆಟ್ವರ್ಕ್ ಸಮಸ್ಯೆಯಿಂದ ಅಥವಾ ಇಂಟರ್ನೆಟ್ ವ್ಯವಸ್ಥೆ ಇಲ್ಲದ ಕಾರಣದಿಂದ ಅವರಿಗೆ ಆನ್ಲೈನ್ ಪಾಠವು ಸಿಗುತ್ತಿಲ್ಲ. ಇನ್ನು ಪುಟಾಣಿ ವಿದ್ಯಾರ್ಥಿಗಳಿಗೆ ಆನ್ಲೈನ್ ಪಾಠವು ಸೂಕ್ತವಲ್ಲ ಇದರ ಬಗ್ಗೆಯೂ ಸಹ ಶಿಕ್ಷಣ ಇಲಾಖೆಯು ಸ್ವಲ್ಪ ಯೋಚಿಸಬೇಕು ಮತ್ತು ಆದಷ್ಟು ಬೇಗ ಎಲ್ಲವುದಕ್ಕೂ ಕ್ರಮ ಕೈಗೊಳ್ಳಬೇಕು ಎಂದು ನನ್ನ ಅಭಿಪ್ರಾಯ.

-ದಿವ್ಯಶ್ರೀ. ವಿ
ಬೆಂಗಳೂರು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version