ದಿನದ ಸುದ್ದಿ

ಕಾಲೇಜುಗಳಲ್ಲಿ ಆನ್ ಲೈನ್ ಸುರಕ್ಷತೆ ಕಾರ್ಯಕ್ರಮ ; ವಿದ್ಯಾರ್ಥಿಗಳಿಗೆ ತರಬೇತಿ

Published

on

ಸುದ್ದಿದಿನಡೆಸ್ಕ್:ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚುತ್ತಿರುವ ಬೆದರಿಕೆ ಹಾಗೂ ಮೋಸದ ಜಾಲಗಳನ್ನು ಗುರುತಿಸುವ ಸಂಬಂಧ ಮೆಟಾ ಕಂಪನಿ ಸಹಯೋಗದಲ್ಲಿ 10 ಲಕ್ಷ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿಂದು ಮಾತನಾಡಿದ ಸಚಿವರು, ಶಾಲಾ, ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಗಳೊಂದಿಗೆ ವಿದ್ಯಾರ್ಥಿಗಳಿಗೆ ತರಬೇತಿ ಜೊತೆಗೆ ಅವರಲ್ಲಿ ಜಾಗರೂಕತೆ ಮತ್ತು ಜವಾಬ್ದಾರಿಯ ಮನಸ್ಥಿತಿಯನ್ನು ರೂಪಿಸಲಾಗುವುದು ಎಂದರು.

ಕರ್ನಾಟಕ ಸರ್ಕಾರ ಮತ್ತು ಮೆಟಾ ಕಂಪನಿ ಜಂಟಿಯಾಗಿ 2025ರ ವೇಳೆಗೆ ರಾಜ್ಯದ ಒಂದು ಲಕ್ಷ ಶಿಕ್ಷಕರು ಮತ್ತು 10 ಲಕ್ಷ ವಿದ್ಯಾರ್ಥಿಗಳನ್ನು ಡಿಜಿಟಲ್ ಸುರಕ್ಷತಾ ಜ್ಞಾನ ಮತ್ತು ಕೌಶಲ್ಯಗಳೊಂದಿಗೆ ಸಬಲೀಕರಣಗೊಳಿಸುವ ಉದ್ದೇಶ ಹೊಂದಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version