ದಿನದ ಸುದ್ದಿ
ಯಾಂತ್ರೀಕೃತ ಭತ್ತ ಬೇಸಾಯ ಆನ್‍ಲೈನ್ ತರಬೇತಿ
ಸುದ್ದಿದಿನ,ದಾವಣಗೆರೆ : ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಕಾಡಜ್ಜಿ ದಾವಣಗೆರೆ ವತಿಯಿಂದ ಜ.25 ರಂದು ಅಪರಾಹ್ನ 12.30 ರಿಂದ 1.30 ರವರೆಗೆ ಯಾಂತ್ರೀಕೃತ ಭತ್ತ ಬೇಸಾಯದ ಕುರಿತು ಆನ್‍ಲೈನ್ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಭತ್ತವನ್ನು 113 ದೇಶಗಳಲ್ಲಿ ಬೆಳೆಯಲಾಗುತ್ತಿದ್ದು, ಭಾರತವು ವಿಸ್ತೀರ್ಣದಲ್ಲಿ ಭತ್ತ ಬೆಳೆಯುವ ಎರಡನೇ ಪ್ರಮುಖ ರಾಷ್ಟ್ರವಾಗಿದೆ. ಅಕ್ಕಿಯು ನಮ್ಮ ಪ್ರಮುಖ ಆಹಾರವಾಗಿದ್ದು, ಭತ್ತವನ್ನು ನಮ್ಮ ಜಿಲ್ಲೆಯಲ್ಲಿ ಸುಮಾರು 60,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಕೂಲಿ ಆಳುಗಳ ಕೊರತೆ ಹೆಚ್ಚಿನ ಕೂಲಿ, ಕೃಷಿ ಪರಿಕರಗಳ ಬೆಲೆಯಲ್ಲಿ ಹೆಚ್ಚಳ, ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ ಮುಂತಾದ ಕಾರಣಗಳಿಂದ ಭತ್ತದ ಗದ್ದೆಗಳನ್ನು ವಾಣಿಜ್ಯ ಬೆಳೆಗಳಿಗೆ ಪರಿವರ್ತಿಸುತ್ತಿದ್ದಾರೆ. ಆದರೆ ಅಕ್ಕಿಯು ನಮ್ಮ ಪ್ರಮುಖ ಆಹಾರವಾಗಿದ್ದು, ಭತ್ತದ ಬೇಸಾಯವು ಅನಿವಾರ್ಯವಲ್ಲದೇ ಅವಶ್ಯಕತೆಯೂ ಹೌದು. ಭತ್ತದ ಯಾಂತ್ರೀಕೃತ ನಾಟಿಯಿಂದ ಅಧಿಕ ಇಳುವರಿ ಪಡೆಯುವುದರ ಜೊತೆಗೆ ಭತ್ತದ ಕೃಷಿಯನ್ನು ಲಾಭದಾಯಕವಾಗಿ ಮುಂದುವರೆಸಿಕೊಂಡು ಹೋಗಬಹುದು.
ಈ ನಿಟ್ಟಿನಲ್ಲಿ ಬೇಸಾಯ ಶಾಸ್ತ್ರಜ್ಞರಾದ ಡಾ.ಮಲ್ಲಿಕಾರ್ಜುನ ಇವರು ಯಾಂತ್ರಿಕ ಭತ್ತ ಬೇಸಾಯ ಕುರಿತು ವಿಷಯ ಮಂಡನೆ ಮಾಡಲಿದ್ದು, ರೈತರು meet.google.com/uwt-rgfd-dop ನ ಗೂಗಲ್ ಮೀಟ್ ಲಿಂಕ್ ಅನ್ನು ಬಳಸಿ ತರಬೇತಿಯ ಪ್ರಯೋಜನ ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ಕೃಷಿ ನಿರ್ದೇಶಕರು, ಜಿಲ್ಲಾ ಕೃಷಿ ತರಬೇತಿ ಕೇಂದ್ರ ಕಾಡಜ್ಜಿ, ದಾವಣಗೆರೆ ದೂ.ಸಂ: 9945910090/8277928964 ನ್ನು ಸಂಪರ್ಕಿಸಬಹುದೆಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243