/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ಈ ಮತಗಟ್ಟೇಲಿ ನಾಲ್ವರೇ ಮತದಾರರು..!

Published

on

ಸುದ್ದಿದಿನ ದೆಹಲಿ: ಒಂದು ಗ್ರಾಮವೆಂದರೆ ಕನಿಷ್ಠ ನೂರು ಜನರಾದರೂ ವಾಸಿಸುತ್ತಾರೆ, ಕನಿಷ್ಠ ೫೦ ಜನರಿಗೆ ಮತದಾನದ ಹಕ್ಕು ಇರುತ್ತದೆ. ಆದರಿಲ್ಲೊಂದು ಹಳ್ಳಿಯಲ್ಲಿ ಕೇವಲ ನಾಲ್ಕೇ ಮತದಾರರಿದ್ದಾರೆ. ಅದು ಒಂದೇ ಕುಟುಂಬಕ್ಕೆ ಸೇರಿ ಮೂವರಿದ್ದು, ಒಬ್ಬರು ಮಾತ್ರ ಬೇರೆಯವರು.

ಚತ್ತೀಸಗಡ ರಾಜ್ಯದ ಭರತ್ಪುರ್-ಸೋನ್ಹಾಟ್ ವಿಧಾನಸಭಾ ಕ್ಷೇತ್ರದ ಚಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೆರಂಧಂದ ಹಳ್ಳಿಯಲ್ಲಿ ಎರಡು ಕುಟುಂಬಗಳು ವಾಸಿಸುತ್ತಿದ್ದು, ಇದರ ಒಂದು ಕುಟುಂಬದ ನಾಲ್ವರು, ಮತ್ತೊಂದು ಕುಟುಂಬದಲ್ಲಿ ಒಬ್ಬರು ವಾಸಿಸುತ್ತಿದ್ದಾರೆ.

ಕೇವಲ ನಾಲ್ವರೇ ಮತದಾರರಿರುವ ಈ ಹಳ್ಳಿ ಇರುವುದು ಚತ್ತೀಸಗಡ ರಾಜ್ಯದ ಅರಣ್ಯ ಪ್ರದೇಶದಲ್ಲಿ. ಗ್ರಾಮ ಪಂಚಾಯಿತಿ ಕೇಂದ್ರದಿಂದ ಬಹುದೂರಲ್ಲಿದೆ. ಗುಡ್ಡದ ಕಾಲುದಾರಿಯಲ್ಲಿ 15 ಕಿಮೀ ಸಾಗಿದ ಬಳಿಕ ಹಳ್ಳಿ ಸಿಗುತ್ತದೆ. ಇಲ್ಲಿ ಕೇವಲ ಎರಡೇ ಕುಟುಂಬಗಳು ವಾಸಿಸುತ್ತಿವೆ. ಆದರೆ, ಚುನಾವಣೆ ಆಯೋಗ ಮತದಾರರ ಮತದಾನ ಹಕ್ಕು ಕಸಿದುಕೊಳ್ಳದೇ ಸೂಕ್ತ ವ್ಯವಸ್ಥೆ ಮಾಡಿದೆ. ಅಲ್ಲದೇ ಈ ಹಳ್ಳಿಯ ಮತಗಟ್ಟೆಯ ಸಂಖ್ಯೆ 143 ಇರುವುದು ಮತ್ತೊಂದು ವಿಶೇಷ.

ಚುನಾವಣೆಗೆ ನಿಯೋಜನೆಗೊಂಡ ಅಧಿಕಾರಿಗಳು ಈ ಮತಗಟ್ಟೆಗೆ ಒಂದು ದಿನ ಮೊದಲೇ ತಲುಪಲಿದ್ದಾರೆ. ಅಲ್ಲದೇ ಈ ಹಳ್ಳಿ ತಲುಪಲು ಐದರಿಂದ ಆರು ಕಿಮೀ ನದಿ ದಾಟಬೇಕು. ಮುಖ್ಯರಸ್ತೆಯಿಂದ 15 ಕಿಮೀ ದೂರದಲ್ಲಿದೆ. ಇಂತಹ ದುರ್ಗಮ ರಸ್ತೆ, ಅತಿ ಕಡಿಮೆ ಸಂಪರ್ಕ ಸಾಧನಗಳ ಇರುವ ಹಳ್ಳಿಯಲ್ಲೂ ಜನರಿಗೆ ಮತದಾನ ವ್ಯವಸ್ಥೆ ಮಾಡಲು ಅಗತ್ಯ ಕ್ರಮವನ್ನು ಚುನಾವಣಾ ಆಯೋಗ ಕೈಗೊಂಡಿದೆ.

ಚತ್ತೀಸಗಡದಲ್ಲಿ ಮತದಾನ ಎರಡು ಹಂತಗಳಲ್ಲಿ ನಡೆಯಲಿದ್ದು, ಮೊದಲ ಹಂತದಲ್ಲಿ ನವೆಂಬರ್ 12ರಂದು ರಾಜ್ಯದ ದಕ್ಷಿಣ ಭಾಗದ 18 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ ಮತ್ತು ಎರಡನೇ ಹಂತದ ಚುನಾವಣೆ ನವೆಂಬರ್ 20ರಂದು ನಡೆಯಲಿದೆ. ಎರಡೂ ಹಂತಗಳಲ್ಲಿ ಮತಗಳ ಎಣಿಕೆ ಕಾರ್ಯ ಡಿಸೆಂಬರ್ 11ರಂದು ನಡೆಯಲಿದೆ.

Trending

Exit mobile version