ದಿನದ ಸುದ್ದಿ
ಹಿರಿಯ ವೈದ್ಯರಿಂದ ದಂತ ಚಿಕಿತ್ಸಾ ಶಿಬಿರ ಉದ್ಘಾಟನೆ
ಸುದ್ದಿದಿನ,ಬೆಂಗಳೂರು: ಬೆಂಗಳೂರು ನಗರ ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಎಂ. ಆರ್. ಅಂಬೇಡ್ಕರ್ ದಂತ ಮಹಾ ವಿದ್ಯಾಲಯದ ಸಹಯೋಗದಲ್ಲಿ ರಾಷ್ಟ್ರೀಯ ಓರಲ್ ಹೆಲ್ತ್ ಪಾಲಿಸಿ ಅಡಿಯಲ್ಲಿ ಹಮ್ಮಿಕೊಂಡಿದ್ದ ಉಚಿತ ದಂತ ಆರೋಗ್ಯ ತಪಾಸಣೆ ಹಾಗೂ ದಂತ ಚಿಕಿತ್ಸಾ ಶಿಬಿರ ನಡೆಯಿತು.
ಬೆಂಗಳೂರಿನ ಮಲ್ಲೇಶ್ವರಂ ವ್ಯಾಪ್ತಿಯಲ್ಲಿ ಬರುವ ಕೆ.ಸಿ.ಜನರಲ್ ಆಸ್ಪತ್ರೆ ಆವರಣದಲ್ಲಿ ನಿನ್ನೆ ಕೆ.ಸಿ.ಜನರಲ್ ಆಸ್ಪತ್ರೆ ಯ ವೈದ್ಯಕೀಯ ಅಧೀಕ್ಷಕರಾದ ಡಾ. ಬಿ.ಆರ್. ವೆಂಕಟೇಶಯ್ಯ ಮತ್ತು ಓ. ಟಿ.ಡಿ.ಸರ್ಜನ್ ಡಾ. ಸತೀಶ್. ಪಿ ಅವರ ಅಧ್ಯಕ್ಷತೆಯಲ್ಲಿ ಶಿಬಿರವನ್ನು ಉದ್ಘಾಟಿಸಲಾಯಿತು.
ಇದೇ ಸಂದರ್ಭದಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರದಲ್ಲಿ 60 ಫಲಾನುಭವಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರು ಉತ್ತರ ತಾಲೂಕಿನ ದಂತ ಆರೋಗ್ಯ ಅಧಿಕಾರಿಗಳಾದ ಡಾ. ಪುಷ್ಪ ಲತ ಸಿ.ವಿ, ಡಾ. ನಿರ್ಮಲಾ ರೆಡ್ಡಿ ಕೆ. ಡಾ. ಹೇಮಲತ ಸಿ.ಎಚ್., ಎಂ ಆರ್. ಅಂಬೇಡ್ಕರ್ ದಂತ ಮಹಾ ವಿದ್ಯಾಲಯದ ಸಾಮೂಹಿಕ ದಂತ ವಿಭಾಗದ ದಂತ ವೈದ್ಯರಾದ ಡಾ. ರುಕ್ಮಿಣಿ, ಡಾ. ಗೀತಾ , ಹಾಗೂ ಸರ್ಕಾರಿ ದಂತ ಮಹಾ ವಿದ್ಯಾಲಯದ ಮತ್ತು ಅಂಬೇಡ್ಕರ್ ದಂತ ಮಹಾ ವಿದ್ಯಾಲಯದ ಗೃಹ ದಂತ ವೈದ್ಯರು, ಆಸ್ಪತ್ರೆಯ ಎ.ಒ. ಚಾಮರಾಜ್ ಮೊದಲಾದವರು ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243