ದಿನದ ಸುದ್ದಿ

ಆಪರೇಷನ್ ಹ್ಯಾಶ್ಟ್ಯಾಗ್: ರಾಜಕೀಯ, ಹಿಂದುತ್ವ ವಿಚಾರಗಳು ಟ್ವಿಟರ್ನಲ್ಲಿ ಹೇಗೆ ಟ್ರೆಂಡ್ ಆಗುತ್ತವೆ..?

Published

on

ಟ್ವಿಟರ್ ಹ್ಯಾಶ್ ಟ್ಯಾಗ್ಗಳ ಹಿಂದೆ ಕೆಲವು ಗುಂಪುಗಳು ಕೆಲಸ ಮಾಡುತ್ತಿವೆ ಎಂಬುದು ಹೊಸದೇನಲ್ಲ. ಈ ಹಿಂದೆ ಹಿಂದುತ್ವ, ಮೋದಿ ಪ್ರಣೀತ ವಿಷಯಗಳು, ಬಿಜೆಪಿ ಸರ್ಕಾರದ ಯೋಜನೆಗಳು ಇವೇ ಮೊದಲಾದ ಹ್ಯಾಶ್ಟ್ಯಾಗ್ಗಳನ್ನು ಟ್ರೆಂಡ್ ಮಾಡಲು ಸ್ವಯಂ ಸೇವಕರಿಗೆ ಹಣ ನೀಡಿ ಟ್ವೀಟ್ ಮಾಡಿಸುತ್ತಿದ್ದ ವಿಷಯ ಗೊತ್ತೇ ಇದೆ.

ಚಾಟ್ಬೋಟ್ಗಳನ್ನು ಬಳಸಿ ನಿಗದಿತ ಹ್ಯಾಶ್ ಟ್ಯಾಗ್ ಇರುವ ಟ್ವೀಟ್ಗಳು ತಂತಾನೇ ಮರು ಟ್ವೀಟ್ ಮಾಡುವ ತಂತ್ರ ಹೊಸದೇನಲ್ಲ.

ಈಗ ಫೇಸ್ಬುಕ್ನಲ್ಲಿ ಸಕ್ರಿಯವಾಗಿರುವ ಗುಂಪುಗಳು ಹಿಂದುತ್ವ ಕುರಿತ ವಿಷಯಗಳನ್ನು ಟ್ವಿಟರ್ನ ಟಾಪ್ ಟ್ರೆಂಡ್ಗೆ ತರುವ ಪ್ರಕ್ರಿಯೆಗೆ ಬೆನ್ನೆಲುಬಾಗಿ ನಿಂತಿವೆ. ಈ ರೀತಿ ಕೆಲಸ ಮಾಡುವ ನೂರಾರು ಫೇಸ್ಬುಕ್ ಖಾಸಗಿ ಗ್ರೂಪ್ಗಳು ಸಕ್ರಿಯವಾಗಿದ್ದು ಪ್ರತೀ ಗ್ರೂಪ್ಗಳು ಸಾವಿರಾರು ಸದಸ್ಯರನ್ನು ಹೊಂದಿವೆ.

ಈ ರೀತಿ ಕೆಲಸ ಮಾಡುತ್ತಿರುವ ಫೇಸ್ಬುಕ್ ಬಲಪಂಥೀಯ ಗುಂಪೊಂದು ಕಳೆದ 28 ದಿನಗಳಲ್ಲಿ ನೂರಾರು ಹಿಂದುತ್ವ ವಿಷಯ ಕುರಿತ ಹ್ಯಾಶ್ಟ್ಯಾಗ್ಗಳನ್ನು ಟ್ವಿಟರ್ನಲ್ಲಿ ಟ್ರೆಂಡ್ ಮಾಡಿದೆ. ಇದೊಂದೇ ಗುಂಪು 1700 ಪೋಸ್ಟ್ಗಳನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದೆ ಎಂದು ಗ್ರೂಪ್ನ ಸದಸ್ಯರೊಬ್ಬರು ತಿಳಿಸಿದ್ದಾರೆ.

ಪ್ರೌಡ್ ಹಿಂದು‘ ಹೆಸರಿನ ಬಲಪಂಥೀಯ ಗುಂಪೊಂದು ತನ್ನ ಬಯೋದಲ್ಲಿ ಕೆಲವೊಂದು ವಿಷಯಗಳನ್ನು ಬರೆದುಕೊಂಡಿದೆ. ಈ ಗುಂಪನ್ನು ಸೇರಲು ವಯಸ್ಸು, ವಿದ್ಯಾರ್ಹತೆ ಏನೂ ಇಲ್ಲ. ಬದಲಾಗಿ ಗುಂಪಿನ ಸದಸ್ಯ ತನ್ನ ಅಹಂ ಅನ್ನು ಪಕ್ಕಕ್ಕಿಟ್ಟು ಗುಂಪಿನ ಅಡ್ಮಿನ್ ನೀಡುವ ವಿಷಯವನ್ನು ರೀಟ್ವೀಟ್ ಮಾಡುವ ಮೂಲಕ, ಆ ಪೋಸ್ಟ್ ಪ್ರೋತ್ಸಾಹಿಸಿ ಇನ್ನಷ್ಟು ವಿಷಯಗಳನ್ನು ಬರೆಯುವ ಮೂಲಕ ಟ್ವಿಟರ್ ಟಾಪ್ ಟ್ರೆಂಡಿಂಗ್ನಲ್ಲಿ ತರಬೇಕು ಎಂದು ಈ ಗುಂಪಿನ ಸದಸ್ಯ ತಿಳಿಸಿದ್ದಾರೆ.

ಟೇಕ್ ಓವರ್ ಹೆಸರಿನ ವ್ಯಕ್ತಿ ಈ ಗುಂಪಿನ ಆಥರ್ ಆಗಿದ್ದು, ಆತ ಮಾಡುವ ಟ್ವೀಟ್ಅನ್ನು ಮರು ಟ್ವೀಟ್ ಮಾಡುವುದು. ಅದೇ ವಿಷಯವನ್ನು ಟ್ವಿಟರ್ನಲ್ಲಿ ಟ್ವೀಟ್ ಮಾಡುವುದು. ಸ್ಕ್ರೀನ್ ಶಾಟ್ಗಳನ್ನು ಶೇರ್ ಮಾಡುವುದು ಇದು ಈ ಗುಂಪಿನ ಕೆಲಸವಾಗಿದೆ.

ಈ ಗುಂಪಿನಲ್ಲಿ ಲಿಂಗ ತಾರತಮ್ಯ, ಹಿಂದುತ್ವ ಇವೇ ಮೊದಲಾದ ಪ್ರಚೋದನೀಯ ವಿಷಯಗಳನ್ನು ಟ್ರೆಂಡ್ ಮಾಡುವುದು. ಜನರನ್ನು ಪ್ರಚೋದಿಸುವುದು ಸದಸ್ಯರ ಕೆಲಸವಾಗಿದೆ.

ಹ್ಯಾಶ್ಟ್ಯಾಗ್ ಇಕ್ಕಳಕ್ಕೆ ಸಿಲುಕಿದ ಪಾತಾಳ್ ಲೋಕ್

ಪಾತಾಳ್ ಲೋಕ್ ಎನ್ನುವ ವೆಬ್ ಸರಣಿಯು ಅಮೇಜಾನ್ ಪ್ರೈಮ್ ವಿಡಿಯೋಸ್ನಲ್ಲಿ ಬಿಡುಗಡೆಯಾಯಿತು. ಈ ಸರಣಿಯಲ್ಲಿ ಪತ್ರಿಕಾ ಸ್ವಾತಂತ್ರ್ಯಕ್ಕೆ ರಾಜಕೀಯ ಅಡೆತಡೆಗಳ ವಿರುದ್ಧ ಪ್ರಸ್ತಾಪಿಸಲಾಗಿದೆ.

ಇದು ಪ್ರಸ್ತುತ ರಾಜಕೀಯ ಸನ್ನಿವೇಶಗಳನ್ನು ಟೀಕಿಸುತ್ತಿದೆ ಎಂದು ಆರೋಪಿಸಿದರೆ. ಇಲ್ಲಿ ಪ್ರಧಾನಿ ಮೋದಿ ಅವರ ಮಾಧ್ಯಮ ನೀತಿಯನ್ನು ವಿರೋಧಿಸುತ್ತಿದೆ ಎನ್ನುವ ಚರ್ಚೆಗಳು ಶುರುವಾದವು.

ಮೇ 20 ಸಂಜೆ 6.33ಕ್ಕೆ ಖಾಸಗಿ ಗ್ರೂಪ್ ಅಡ್ಮಿನ್ ತನ್ನ ಗುಂಪಿನಲ್ಲಿ ಪಾತಾಳ್ ಲೋಕ್ ಪೋಸ್ಟರ್ ಉಲ್ಲೇಖಿಸಿ #Hinduphobic_Bollywood ಎನ್ನುವ ಪೋಸ್ಟ್ ಮಾಡಿದ್ದ. ಅದಾದ ನಾಲ್ಕು ನಿಮಿಷಕ್ಕೆ ಸರಿಯಾಗಿ ಟ್ವಿಟರ್ನಲ್ಲಿ ಮೊದಲ ಟ್ವೀಟ್ ಪೋಸ್ಟ್ ಆಯಿತು.

ಗುಂಪಿನ ನಿಯಮದ ಪ್ರಕಾರ ಅಡ್ಮಿನ್ ಶೇರ್ ಮಾಡುವ ಸ್ಕ್ರೀನ್ ಶಾಟ್ಅನ್ನು ಟ್ವಿಟರ್ನಲ್ಲಿ ಹ್ಯಾಶ್ಟ್ಯಾಗ್ ಸಮೇತ ಟ್ವೀಟ್ ಮಾಡಬೇಕು. ಈ ಗುಂಪು ಮೊದಲು ಪಾತಾಳ್ ಲೋಕ್ನ ನಿರ್ಮಾಪಕರಲ್ಲಿ ಒಬ್ಬರಾದ ಅನುಷ್ಕಾ ಶರ್ಮಾ ಅವರನ್ನು ಟ್ರೋಲ್ ಮಾಡಿತು. ಟೀಮ್ ಇಂಡಿಯಾ ಕ್ಯಾಪ್ಟನ್ ಹಾಗೂ ಅನುಷ್ಕಾ ಅವರ ಪತಿಯೂ ಇಲ್ಲಿ ಟ್ರೋಲ್ಗೆ ಒಳಗಾದರು. ನೋಡ ನೋಡುತ್ತಿದ್ದಂತೆಯೇ ಟ್ವೀಟ್ಗಳ ಸುರಿಮಳೆಯೇ ಹರಿದುಬಂತು. ರೂಢಿಯಂತೆ ಸೋನಂ ಕಪೂರ್, ಸ್ವರ ಭಾಸ್ಕರ್, ಶೃತಿ ಸೇಠ್, ವಿಶಾಲ್ ದಾದ್ಲಾನಿ ಇವರೇ ಮೊದಲಾದವರು ಟ್ರೋಲ್ಗೆ ಗುರಿಯಾದರು.

ಸುಮಾರು 8.30 ಅಂದರೆ ಮೊದಲ ಟ್ವೀಟ್ ಆದ ಎರಡು ಗಂಟೆಗಳ ತರುವಾಯ ಈ ಹ್ಯಾಶ್ ಟ್ಯಾಗ್ ಟಾಪ್ 15 ಟ್ರೆಂಡಿಂಗ್ನಲ್ಲಿತ್ತು. 9.38ರ ವೇಳೆಗೆ ಈ ಹ್ಯಾಶ್ ಟ್ಯಾಗ್ 21 ಸಾವಿರ ಟ್ವೀಟ್ಗಳೊಂದಿಗೆ ಟಾಪ್ 10 ಮೀರಿ ಟಾಪ್ 6ನಲ್ಲಿ ಟ್ರೆಂಡಿಂಗ್ ಆಯಿತು.

11.10ಕ್ಕೆ ಸರಿಯಾಗಿ ಈ ಹ್ಯಾಶ್ಟ್ಯಾಗ್ ಟಾಪ್ 2 ಟ್ರೆಂಡಿಂಗ್ನಲ್ಲಿತ್ತು. 50 ಸಾವಿರ ಟ್ವೀಟ್ಗಳು ಈ ವಿಷಯವಾಗಿ ಹರಿದುಬಂದವು. ಗುಂಪಿನ ಅಡ್ಮಿನ್ಗೆ ಶುಭಾಶಯಗಳ ಮಳೆಯೇ ಹರಿದುಬಂತು. ಆ ದಿನ ಟಾಪ್ 1 ಸ್ಥಾನಕ್ಕೆ ಈ ಹ್ಯಾಶ್ಟ್ಯಾಗ್ ಬರಲಿಲ್ಲ ಕಾರಣ ಆಫಾನ್ ಚಂಡಮಾರುತವು ಮೊದಲ ಸ್ಥಾನದಲ್ಲಿತ್ತು.

ಟ್ವಿಟರ್ ಮತ್ತೆ ವಿಫಲ

ಪ್ರಾಮಾಣಿಕವಾಗಿ ಹರಿದುಬರುವ ವಿಷಯಗಳನ್ನೇ ಟ್ರೆಂಡ್ ಮಾಡಬೇಕೆನ್ನುವುದು ಟ್ವಿಟರ್ ಉದ್ದೇಶವಾದರೂ, ಈ ರೀತಿಯಾದ ಉದ್ದೇಶಪೂರಿತ ತಂತ್ರಗಳಿಂದ ಯಾವ್ಯಾವುದೋ ವಿಷಯಗಳು ಚರ್ಚೆಗೆ ಬರುವುದು ಸಮಾನ್ಯವಾಗಿದೆ. ಟ್ವಿಟರ್ ಈ ವಿಷಯದಲ್ಲಿ ಸೋಲುತ್ತಲೇ ಇದೆ.

ಈ ರೀತಿ ಉದ್ದೇಶಪೂರಿತವಾಗಿ ಟ್ವೀಟ್ ಮಾಡಿ ಅಡ್ಡದಾರಿ ಮೂಲಕ ಟ್ರೆಂಡಿಂಗ್ಗೆ ತರುವುದು ಟ್ವಿಟರ್ನ ಮೂಲ ನಿಯಮದ ಉಲ್ಲಂಘನೆಯಾದರೂ ಅದನ್ನು ಹೇಳುವವರು ಕೇಳುವವರು ಯಾರೂ ಇಲ್ಲವಾಗಿದ್ದಾರೆ.

ಕೃಪೆ: ದಿ ವೈರ್ಆನ್ಲೈನ್ ನ್ಯೂಸ್ ಪೋರ್ಟಲ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version