ಲೈಫ್ ಸ್ಟೈಲ್
ಕಿತ್ತಳೆ ಹಣ್ಣಿನ ಉಪಯೋಗ ಅರಿತರೆ ಅಚ್ಚರಿ ಪಡುತ್ತೀರಿ !
ಕಿತ್ತಳೆ ಹಣ್ಣು ತಿನ್ನಲು ಎಷ್ಟು ರುಚಿಕರವೋ ಆರೋಗ್ಯದ ದೃಷ್ಟಿಯಿಂದ ಅಷ್ಟೇ ಉಪಯುಕ್ತ ಫಲ.
ಕಿತ್ತಳೆ ಹಣ್ಣು ತಿನ್ನಲು ಎಷ್ಟು ರುಚಿಕರವೋ ಆರೋಗ್ಯದ ದೃಷ್ಟಿಯಿಂದ ಅಷ್ಟೇ ಉಪಯುಕ್ತ ಫಲ. ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಹೆಚ್ಚು ಇರುವುದರಿಂದ ರಕ್ತ ಶುದ್ಧಿ ಮಾಡುವರ ಜತೆಗೆ ಬಾಯಾರಿಕೆ ದೂರ ಮಾಡಿ ಲವಲವಿಕೆ ಹೆಚ್ಚಿಸುತ್ತದೆ. ಕಿತ್ತಳೆ ಹಣ್ಣಿನ ಉಪಯೋಗ ಹಾಗೂ ಔಷಧೀಯ ಗುಣಗಳ ಕುರಿತು ಮುಂದೆ ಓದಿ.
ಕಿತ್ತಳೆ ಹಣ್ಣಿನ ಔಷಧೀಯ ಗುಣಗಳು
- 1. ಗರ್ಭಿಣಿಯರು ಆರು ತಿಂಗಳ ನಂತರ ನಿತ್ಯ ಕಿತ್ತಳೆ ಹಣ್ಣು ಸೇವಿಸಿದರೆ ಹೆರಿಗೆ ಸಮಯದಲ್ಲಿ ಅನುಕೂಲ ಹೆಚ್ಚು, ಜತೆಗೆ ಆರೋಗ್ಯ ವೃದ್ಧಿಸುತ್ತದೆ.
- 2. ಕಿತ್ತಳೆ ದ್ರವರೂಪದ ಆಹಾರ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಆದಾಗ ಕಿತ್ತಳೆ ಹಣ್ಣಿನ ರಸ ನೀಡುವುದು ಉತ್ತಮ ಕ್ರಮ.
- 3. ಕಿತ್ತಳೆ ಹಣ್ಣಿನ ಸಿಪ್ಪೆಯಿಂದ ಗೊಜ್ಜು ಹಾಗೂ ಉಪ್ಪಿನಕಾಯಿ ತಯಾರಿಸಿ ಸೇವಿಸುವುದು ಉತ್ತಮ ಕ್ರಮ.
- 4. ಕೆಮ್ಮು ಹಾಗೂ ಸೀತ ನಿವಾರಣೆಗೆ ನಿತ್ಯ ಒಂದು ಕಪ್ ಕಿತ್ತಳೆ ಹಣ್ಣಿನ ರಸ ಹಾಗೂ ಐದು ಚಮಚ ಜೇನು ತುಪ್ಪ ಸೇರಿಸಿ ಸೇವಿಸುವುದರಿಂದ ಸಮಸ್ಯೆ ನಿವಾರಣೆ ಆಗುತ್ತದೆ.
- 5. ಕಿತ್ತಳೆ ಹಣ್ಣಿನ ಸೇವನೆಯಿಂದ ಹೃದಯ ಸಂಬಂಧಿ ರೋಗಗಳು ದೂರಾಗಲು ಸಾಧ್ಯ.
ಬಹು ಉಪಯೋಗಿ ಕಿತ್ತಳೆ ಹಣ್ಣಿನ ಸಿಪ್ಪೆ
ಕಿತ್ತಳೆ, ನಿಂಬೆ, ಮೋಸಂಬಿ, ಮಾದಳ ಹಾಗೂ ಚಕ್ಕೋತ ಫಲಗಳನ್ನ ಜಿಂಜೀರ ಹಣ್ಣುಗಳೆಂದು ಕರೆಯಲಾಗುತ್ತದೆ. ಇವುಗಳಲ್ಲಿ ವಿಟಮಿನ್ ಸಿ ಹೆಚ್ಚಿರುತ್ತದೆ. ಜತೆಗೆ ಇವುಗಳ ಸಿಪ್ಪೆಯಿಂದ ಸುವಾಸನೆ ಬೀರು ತೈಲ ತಯಾರಿಸುವುದುಂಟು
ಕಿತ್ತಳೆ ಹಣ್ಣಿನ ಸಿಪ್ಪೆಯ ಎಣ್ಣೆಯು ಬ್ಯಾಕ್ಟೀರಿಯಾಗಳ ಹಾಗೂ ಇತರ ಸೂಕ್ಷ್ಮ ಜೀವಿಗಳ ಬೆಳೆವಣಿಗೆಯನ್ನು ತಡೆಗಟ್ಟುತ್ತದೆ. ಅಮೆರಿಕಾದ ಕೃಷಿ ವಿಜ್ಞಾನಿಗಳು ನಡೆಸಿದ ಸಂಶೋಧನೆಯಿಂದ ಈ ವಿಷಯ ತಿಳಿದಿದೆ. ಒಂದು ಲೀಟರ್ ನೀರಿನಲ್ಲಿ ಕೇವಲ ಒಂದು ಮಿಲಿ ಲೀಟರ್ ಕಿಕ್ತಳೆ ಸಿಪ್ಪೆ ಎಣ್ಣೆ ಇರುವ ದ್ರಾವಣವನ್ನು ಉಪಯೋಗಿಸಿದರೆ ಸ್ಯಾಲ್ಮೋನಲಾ ಸೇರಿದಂತೆ ಹಲವು ಬ್ಯಾಕ್ಟೀರಿಯಾಗಳ ಬೆಳೆವಣಿಗೆ ತಡೆಯಲು ಸಾಧ್ಯ ಎಂಬುದು ತಜ್ಞರ ಅಭಿಪ್ರಾಯ. ಹಾಲು ಹುಳಿಯಾಗುವುದು, ಅಡುಗೆ ಹಳಸುವುದಕ್ಕೆ ಕಾರಣ ಬ್ಯಾಕ್ಟೀರಿಯಾಗಳು. ಕಿತ್ತಳೆ ಎಣ್ಣೆಯಿಂದ ಅದನ್ನು ತಡೆಯಲು ಸಾಧ್ಯ ಎಂಬುದು ಅಧ್ಯಯನದಿಂದ ಗೊತ್ತಾಗಿದೆ.
ಸಂಗ್ರಹ
ಆರೋಗ್ಯ, ಆಹಾರ, ಜೀವನಶೈಲಿ ಕುರಿತು suddidina.com ಗೆ ನೀವು ಕೂಡ ಲೇಖನ ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ suddidina@gmail.com ಗೆ ಸಂಪರ್ಕಿಸಿ.
#ಆರೋಗ್ಯ #ಆಹಾರ #ಜೀವನಶೈಲಿ #kannadatips #kannadahealthtips #healthtips