ದಿನದ ಸುದ್ದಿ
ನಕ್ಸಲ್ ಬಹಿರಂಗ ಬೆಂಬಲಿಗರ ವಿರುದ್ಧ ಸಂಘಟಿತ ಕಾರ್ಯಾಚರಣೆ; 500ಕ್ಕೂ ಅಧಿಕ ಮಂದಿ ಬಂಧನ
ಸುದ್ದಿದಿನ ಡೆಸ್ಕ್: ನಕ್ಸಲಿಗರ ‘ಬಹಿರಂಗ’ ಬೆಂಬಲಿಗರ ವಿರುದ್ಧ ಮೊದಲ ಬಾರಿಗೆ ಸಂಘಟಿತ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಕಳೆದ ಒಂದು ವರ್ಷದಲ್ಲಿ ಚತ್ತೀಸಗಡ ಒಂದರಲ್ಲೇ ಇಂತಹ 500ಕ್ಕೂ ಹಚ್ಚು ಜನರನ್ನು ಬಂಧಿಸಲಾಗಿದೆ ಎಂದು ಸಿಆರ್.ಪಿಎಫ್ ತಿಳಿಸಿದೆ.
ಎಡಪಂಥೀಯ ತೀವ್ರವಾದಿಗಳಿಗ ಯಾವುದೇ ಅವಕಾಶ ನೀಡಬಾರದು ಎಂದು ರಾಜ್ಯ ಪೊಲೀಸ್ ಪಡೆಗಳ
ಜೊತಗೂಡಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ನಕ್ಸಲರು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿರುವ ಕ್ಷೇತ್ರಗಳ ಆಚಗೂ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸಿಆರ್ಪಿಎಫ್ ಪ್ರಧಾನ ನಿರ್ದೇಶಕ ಆರ್.ಆರ್. ಭಟ್ನಾಗರ್ ತಿಳಿಸಿದ್ದಾರೆ.
ಒಂದು ಲಕ್ಷಕ್ಕೂ ಹೆಚ್ಚು ಕೇಂದ್ರೀಯ ಸಶಸ್ತ್ರ ಮೀಸಲು ಪಡೆ (ಸಿಆರ್ಪಿಎಫ್) ಸಿಬ್ಬಂದಿಯನ್ನು ಸುಸಜ್ಜಿತ ಶಸ್ತ್ರಾಸ್ತ್ರಗಳೊಂದಿಗ ನಕ್ಸಲ್ ಹಾವಳಿ ಇರುವ ದೇಶದ ವಿವಿಧ ಭಾಗಗಳಲ್ಲಿ ನಿಯೋಜಿಸಲಾಗಿದೆ. ನಾವೀಗ ಗ್ರಾಮಗಳಿಗ ತೆರಳಿ ಅಲ್ಲಿ ನಕ್ಸಲ್ ಪರವಾಗಿ ಕಾರ್ಯ ನಿರ್ವಹಿಸುತ್ತಿರುವವರು, ‘ಜನ್ ಮಿಲಿಷಿಯಾ’ ಹಾಗೂ ಇತರರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ. ಇವರು ನಕ್ಸಲರಿಗೆ ಗುಪಚರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ
ಮತ್ತು ಸ್ಥಳೀಯ ಬಂಬಲ ಒದಗಿಸುತ್ತಿದ್ದಾರೆ
ಎಂದು ಭಟ್ನಾಗರ್ ಹೇಳಿದ್ದಾರೆ.