ದಿನದ ಸುದ್ದಿ
ಹಾಸನದಲ್ಲಿ ಉಕ್ಕಿ ಹರಿಯುತ್ತಿದ್ದಾಳೆ ಹೇಮಾವತಿ
ಸುದ್ದಿದಿನ ಡೆಸ್ಕ್ |ಮಲೆನಾಡಿನಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅವಧಿಗೂ ಮೊದಲೇ ಹೇಮಾವತಿ ಜಲಾಶಯ ಭರ್ತಿಯಾಗಿದ್ದು, ಜಲಾಶಯದ ಹೆಚ್ಚುವರಿ ನೀರನ್ನು ಶನಿವಾರ ಕ್ರಸ್ಟ್ ಗೇಟ್ ಮೂಲಕ ಹೊರ ಬಿಡಲಾಯಿತು.
ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಯಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ಹೇಮಾವತಿ ಜಲಾಶಯ ಭರ್ತಿಯಾಗುತ್ತಿದ್ದು ಹೆಚ್ಚವರಿ ನೀರನ್ನು ನಾಲ್ಕು ವರ್ಷಗಳ ಬಳಿಕ ಕ್ರಸ್ಟ್ ಗೇಟ್ ತೆರೆದು ಹರಿಬಿಡಲಾಯಿತು.
ಹೇಮಾವತಿ ಡ್ಯಾಂಗೆ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಿರುವುದರಿಂದ 2922 ಅಡಿ ಡ್ಯಾಂ ಈಗಾಗಲೇ ಭರ್ತಿಯಾಗಿದೆ.
ಈಗಾಗಲೇ ಗರಿಷ್ಠ ಮಟ್ಟ ಜಲಾಶಯದ ಗೇಟನ್ನು 2013 ಜುಲೈ ತಿಂಗಳ ಎರಡನೇ ವಾರದಲ್ಲಿ ಗೇಟ್ ತೆರೆಯಲಾಗಿತ್ತು. ಈಗ ನಾಲ್ಕು ವರ್ಷಗಳ ಆನಂತರ ಜಲಾಶಯ ಭರ್ತಿಯಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401