ದಿನದ ಸುದ್ದಿ

‘ಪಿ.ಎಂ. ನರೇಂದ್ರ ಮೋದಿ ಮತ್ತು ಲಕ್ಷ್ಮೀ ಎನ್‍ಟಿಆರ್’ ಸಿನಿಮಾಗಳ ಪ್ರದರ್ಶನ ನಿಷೇಧ

Published

on

ಸುದ್ದಿದಿನ,ಬಳ್ಳಾರಿ: ಲೋಕಸಭಾ ಚುನಾವಣೆ-2019ರ ಹಿನ್ನಲೆಯಲ್ಲಿ ಮಾ.10 ರಿಂದ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಪಿ.ಎಂ.ನರೇಂದ್ರ ಮೋದಿ ಹಾಗೂ ಲಕ್ಷ್ಮೀ ಎನ್.ಟಿ.ಆರ್. ಜೀವನ ಆಧಾರಿತ ಚಲನಚಿತ್ರಗಳ ಪ್ರದರ್ಶನ ನಿಷೇಧಿಸಲಾಗಿದೆ ಎಂದು ಅಪರ ಜಿಲ್ಲಾ ದಂಡಾಧಿಕಾರಿ ಎಂ.ಸತೀಶ್ ಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾರತ ಚುನಾವಣಾ ಆಯೋಗವು ಏ.10ರ ಪತ್ರದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಮಾ.10ರಿಂದ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಪಿ.ಎಂ.ನರೇಂದ್ರ ಮೋದಿ ಹಾಗೂ ಲಕ್ಷ್ಮಿ ಎನ್.ಟಿ.ಆರ್. ಚಲನಚಿತ್ರಗಳು ರಾಜಕೀಯ ವ್ಯಕ್ತಿಗಳ ಜೀವನಾಧಾರಿತ ಚಿತ್ರಗಳಾಗಿರುತ್ತವೆ.

ಸದರಿ ಈ ಚಲನಚಿತ್ರಗಳನ್ನು ಸಾರ್ವಜನಿಕರಿಗೆ ಪ್ರದರ್ಶಿಸಬಾರದೆಂದು ಭಾರತ ಚುನಾವಣಾ ಆಯೋಗವು ನಿರ್ದೇಶನ ನೀಡಿರುತ್ತದೆ ಎಂದು ಅವರು ವಿವರಿಸಿದ್ದಾರೆ. ಈ ಚಲನಚಿತ್ರಗಳನ್ನು ಚುನಾವಣಾ ಮಾದರಿ ನೀತಿ ಸಂಹಿತೆ ಮುಕ್ತಾಯವಾಗುವವರೆಗೂ ಪ್ರದರ್ಶಿಸಬಾರದೆಂದು ಕಟ್ಟುನಿಟ್ಟಿನ ನಿರ್ದೇಶನಗಳನ್ನು ಸಹ ನೀಡಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Trending

Exit mobile version