ದಿನದ ಸುದ್ದಿ
ಯೋಗಿಗೆ ಟಾಂಗ್ ಕೊಡಲು ರಸ್ತೆ ಹೊಂಡಗಳಲ್ಲಿ ಭತ್ತದ ನಾಟಿ!
ಸುದ್ದಿದಿನ ಡೆಸ್ಕ್: ಉತ್ತರ ಪ್ರದೇಶದ ಮೀರತ್ ನಗರದಲ್ಲಿ ಒಂದಾದ ಅಲ್ಲಿನ ನಿವಾಸಿಗಳು ರಸ್ತೆ ಹೊಂಡಗಳಲ್ಲಿ ಭತ್ತದ ನಾಟಿ ಮಾಡುವ ಮೂಲಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‍ಗೆ ಟಾಂಗ್ ಕೊಟ್ಟಿದ್ದಾರೆ.
ತಾವು ಅಧಿಕಾರ ಸ್ವೀಕರಿಸಿದ ಒಂದು ವರ್ಷದಲ್ಲಿ ಉತ್ತರ ಪ್ರದೇಶದ ಎಲ್ಲ ರಸ್ತೆಗಳನ್ನು ಹೊಂಡಗಳಿಂದ ಮುಕ್ತಗೊಳಿಸಲಾಗುವುದು ಎಂದು ಆದಿತ್ಯನಾಥ್ ಅವರು ಭರವಸೆ ನೀಡಿದ್ದರು. ಅದನ್ನು ನಂಬಿದ್ದ ಜನರು ಎರಡು ವರ್ಷಗಳ ಕಾಲ ತಾಳ್ಮೆಯಿಂದ ಕಾದಿದ್ದರು. ಯಾವಾಗ ಮಳೆಗಾಲ ಆರಂಭವಾಗಿ ರಸ್ತೆಗಳ ಪರಿಸ್ಥಿತಿ ಹದಗೆಟ್ಟಿತೋ ಆಗ ಕುದ್ದುಹೋಗಿ ಮೀರತ್ ನಗರದ ರಸ್ತೆಗಳಲ್ಲಿ ಭತ್ತದ ನಾಟಿ ಮಾಡಿದ್ದಾರೆ.
ನಾನು ಬಿಜೆಪಿ ಬೆಂಬಲಿಗ ಆದರೆ, ಅಭಿವೃದ್ಧಿ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಆದಿತ್ಯನಾಥ್ ಅವರು ಭರವಸೆ ನೀಡಿದಂತೆ ರಸ್ತೆಗಳನ್ನು ರಿಪೇರಿ ಮಾಡಿಸಲಿ ಎಂದು ತಿಳಿಸಿದ್ದಾರೆ.
ನಾವು ನಿಷ್ಪ್ರಯೋಜಕರು, ನಿಮ್ಮ ಬೀಜ ನಮ್ಮ ನೀರು ರಸ್ತೆಯಲ್ಲೇ ಕೃಷಿ ಮಾಡುತ್ತಿದ್ದೇವೆ ನೋಡಿ ಹೇಗಿದೆ ಸಬ್‍ಕಾ ಸಾತ್ ಸಬ್‍ಕಾ ವಿಕಾಸ್ ಎಂದು ಸರಕಾರವನ್ನು ಅಣಕಿಸಿ ಎಲ್ಲೆಡೆ ಬ್ಯಾನರ್ ಹಾಕಲಾಗಿದ್ದು ಆಡಳಿತ ಸರಕಾರಕ್ಕೆ ಇದು ಮುಖಭಂಗ ಮಾಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401