ಸಿನಿ ಸುದ್ದಿ

ವಿಡಿಯೋ | ಕಿಚ್ಚನ “ಬಂದ ನೋಡು ಪೈಲ್ವಾನ್” ಥೀಮ್ ಸಾಂಗ್ ಗೆ ಭರ್ಜರಿ ರೆಸ್ಪಾನ್ಸ್..!

Published

on

ಸುದ್ದಿದಿನ ಡೆಸ್ಕ್ : ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಸಿನೆಮಾ ಟೀಸರ್ ಕಿಚ್ಚನ ಅಭಿಮಾನಿಗಳಲ್ಲಿ‌ ಕಿಚ್ಚು ಹಚ್ಚಿದಂತೂ ಸತ್ಯ. ಅದರಂತೆಯೇ ಇಂದು ಚಿತ್ರತಂಡ ಐದು ಭಾಷೆಯಲ್ಲಿ ರಿಲೀಸ್ ಮಾಡಿರುವ ಪೈಲ್ವಾನ್ ಸಿನೆಮಾದ ಥೀಮ್ ಸಾಂಗ್ “ಬಂದ ನೋಡು ಪೈಲ್ವಾನ್ ” ಕೂಡ ಸಖತ್ ಆಗಿದ್ದು ಅಭಿಮಾನಿಗಳು ಫಿದಾ ಆಗಿದ್ದಾರೆ.

ಛಾಯಾಗ್ರಾಹಕ ಕೃಷ್ಣ ಅವರು ನಿರ್ದೇಶಿಸಿರುವ ಈ ಸಿನೆಮಾಗೆ ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ಈ ಸಿನೆಮಾಗೆ ಸಂಗೀತ ಒದಗಿಸಿದ್ದಾರೆ. ಸ್ವಪ್ನ ಕೃಷ್ಣ ಸಿನೆಮಾದ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಐದು ಭಾಷೆಯಲ್ಲಿ ರಿಲೀಸ್ ಮಾಡಲು ಸಕಲ ತಯಾರಿ ನಡೆಸಿದ್ದಾರೆ. ಅಂದ ಹಾಗೆ ಈ ಹಾಡು ಯೂಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version