ಸಿನಿ ಸುದ್ದಿ

ವಿಡಿಯೋ | 3 ಮಿಲಿಯನ್ ವೀವ್ಸ್ ನತ್ತ ‘ ಕಿಚ್ಚನ ಪೈಲ್ವಾನ್’ ಟೀಸರ್..!

Published

on

ಸುದ್ದಿದಿನ ಡೆಸ್ಕ್ : ಸಂಕ್ರಾಂತಿ ಹಬ್ಬದಂದು ರಿಲೀಸ್ ಆದ ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾನ್’ ಟೀಸರ್ ಹೊಸದೊಂದು ಟ್ರೆಂಡ್ ಸೃಷ್ಟಿಸಿದ್ದು, ಕಿಚ್ಚನ ಅಭಿಮಾನಿಗಳು ಟೀಸರ್ ಗೆ ಫಿದಾ ಆಗಿದ್ದಾರೆ.

ಭಾರತೀಯ ಚಿತ್ರರಂಗದ ಹಲವು ನಾಯಕರುಗಳು ಪೈಲ್ವಾನ್ ಟೀಸರ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕಿಚ್ಚ ಮತ್ತು ಪೈಲ್ವಾನ್ ಚಿತ್ರತಂಡ ಭಾರೀ ಸಂತಸದಲ್ಲಿದೆ. ಟೀಸರ್ ನಿಂದಲೇ ಇಷ್ಟು ಸದ್ದುಮಾಡಿರೋ ಪೈಲ್ವಾನ್ ಸಿನೆಮಾದ ರಿಲೀಸ್ ಗಾಗಿ ಅಭಿಮಾನಿಗಳು ಕಾತುರದಲ್ಲಿದ್ದಾರೆ.

ಗಜಕೇಸರಿ ಹಾಗೂ ಹೆಬ್ಬುಲಿಯಂತಹ ಸೂಪರ್‌ಹಿಟ್ ಸಿನೆಮಾಗಳನ್ನು ಕೊಟ್ಟಿದ್ದ ನಿರ್ದೇಶಕ ಕೃಷ್ಣ ಈ ಸಿನೆಮಾವನ್ನು ನಿರ್ಮಿಸುವುದರ ಜತೆಗೆ ನಿರ್ದೇಶನ ಮಾಡಿದ್ದಾರೆ. ಅರ್ಜುನ್ ಜನ್ಯಾ ಅವರ ಸಂಗೀತ ಈ ಸಿನೆಮಾಕ್ಕಿದೆ. ಅಂದ ಹಾಗೆ ಪೈಲ್ವಾನ್ ಟೀಸರ್ ಯೂಟ್ಯೂಬ್ ನಲ್ಲಿ ಭಾರೀ ಹವಾ ಎಬ್ಬಿಸಿದ್ದು, ಮೂರು ಮಿಲಿಯನ್ ವೀವ್ಸ್ ನತ್ತ ಮುನ್ನುಗ್ಗುತ್ತಿದೆ.

ಟೀಸರ್ ನೋಡಿ

https://youtu.be/POMumo3pS80

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version