ದಿನದ ಸುದ್ದಿ

ಪಾಕ್ ಗುಂಡಿನ ದಾಳಿಗೆ ನಾಲ್ವರು ಯೋಧರ ಬಲಿ

Published

on

ಸುದ್ದಿದಿನ ಡೆಸ್ಕ್: ಜಮ್ಮು ಕಾಶ್ಮೀರದ ಸಾಂಬಾ ಜಿಲ್ಲೆಯ ಚಂಬಿಯಾ ಸೆಕ್ಟರ್‍ನಲ್ಲಿ ಪಾಕಿಸ್ತಾನ ಪಡೆಗಳು ನಡೆಸದ ಗುಂಡಿನ ದಾಳಿಗೆ ಗಡಿ ಭದ್ರತಾಪಡೆಯ ನಾಲ್ವರು ಯೋಧರು ಬಲಿಯಾಗಿದ್ದಾರೆ.
ಭಾರತೀಯ ಪಡೆಗಳು ಗಡಿ ಕಾಯುತ್ತಿರುವ ಸಮಯದಲ್ಲಿ ಕದನ ವಿರಾಮ ಉಲ್ಲಂಘಿಸಿರುವ ಪಾಕ್ ಯೋಧರು ಬಿಎಸ್‍ಎಫ್ ಯೋಧರೆಡೆಗೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದಾರೆ.
ಮೃತರಲ್ಲಿ ಒಬ್ಬ ಸಹಾಯಕ ಕಮಾಂಡೆಂಟ್, ಒಬ್ಬ ಸಬ್ ಇನ್ಸ್‍ಪೆಕ್ಟರ್ ಹಾಗೂ ಇಬ್ಬರು ಸೈನಿಕರು ಎಂದು ತಿಳಿದುಬಂದಿದೆ. ಮೃತರ ಮೂಲಗಳ ಕುರಿತು ಇನ್ನು ಯಾವುದೇ ಮಾಹಿತಿಗಳು ಸಿಕ್ಕಿಲ್ಲ.

Leave a Reply

Your email address will not be published. Required fields are marked *

Trending

Exit mobile version