ದಿನದ ಸುದ್ದಿ

ಪಾಕ್ ದಾಳಿಗೆ ಬಲಿಯಾದರು ತಾಯಿ ಮಕ್ಕಳು

Published

on

ಸುದ್ದಿದಿನ, ಕೃಷ್ಣಾಘಾಟಿ : ಗಡಿಯಲ್ಲಿ ಮುಂದುವರಿದ ಪಾಕ್ ಸೇನೆ‌ ಮತ್ತೆ ಪುಂಡಾಟ ನಡೆಸಿದ್ದು, 5 ಕಡೆ ಅಪ್ರಚೋದಿತ ಗುಂಡಿನ ದಾಳಿ ಮಾದಿಡ ಪರಿಣಾಮವಾಗಿ, ಪೂಂಚ್ ನಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.

ಪೂಂಚ್ ಹಾಗೂ ರಜೌರಿ, ಕೃಷ್ಣಘಾಟಿ ಬಳಿ ಮಕ್ಕಳನ್ನು ಗುರಿಯಾಗಿರಿಸಿಕೊಂಡು ಪಾಕ್ ಸೇನೆ ಫೈರಿಂಗ್ ಮಾಡಿದ್ದು, ಹಂದ್ವಾರ ಬಳಿಯ ಶೆಲ್ಲಿಂಗ್ ನಲ್ಲಿ ಇಬ್ಬರು ಸಾವು, 8 ಜನರಿಗೆ ಗಾಯವಾಗಿವೆ. ಕೃಷ್ಣಘಾಟಿ ಸೆಕ್ಟರ್ ಬಳಿಯ ಸಲೋಟ್ರಿ ಗ್ರಾಮದ ಬಳಿ ಹೆವಿ ಶೆಲ್ಲಿಂಗ್
ಫೈರಿಂಗ್ ವೇಳೆ 9 ತಿಂಗಳ ಮಗು ಹಾಗೂ 5 ವರ್ಷದ ಬಾಲಕಿ ಸಾವನ್ನಪ್ಪಿದ್ದಾರೆ. 4 ದಿನಗಳಲ್ಲಿ 48 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ ಪಾಕಿಸ್ತಾನ.

ವಿಷ ಬೆರಕೆ ಪ್ರಯತ್ನ

ಜಮ್ಮು ಕಾಶ್ಮೀರದಲ್ಲಿ ಯೋಧರ ಹತ್ಯೆಗೆ ಪ್ಲಾನ್
ಪಾಕಿಸ್ತಾನ ಸಂಸ್ಥೆ, ಐಎಸ್ ಐ ಸೇರಿ, ಕಾಶ್ಮೀರದಲ್ಲಿರುವ ಪಾಕ್ ಏಜೆಂಟ್ ಗಳ ಮೂಲಕ ಸೈನಿಕರ ಪಡಿತರದಲ್ಲಿ ವಿಷ ಬೆರೆಸಲು ಪ್ರಯತ್ನ ನಡೆಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version