ಸಿನಿ ಸುದ್ದಿ
ಪಾಕಿಸ್ತಾನ ವಿಮಾನ ಅಪಘಾತದಲ್ಲಿ ಮೃತಪಟ್ಟ 96 ಜನರಲ್ಲಿ ‘ಸೂಪರ್ ಮಾಡೆಲ್ ಜರಾ ಅಬಿದ್’ ಕೂಡ ಒಬ್ಬರು..!
ಸುದ್ದಿದಿನ ಡೆಸ್ಕ್ : ಮೇ 22 ಶುಕ್ರವಾರ ಪಿಕೆ 8303 ಪಾಕಿಸ್ತಾನಿ ಇಂಟರ್ನ್ಯಾಷನಲ್ ಏರ್ಲೈನ್ಸ್ ವಿಮಾನವು ಕರಾಚಿ ನಗರದ ಜನವಸತಿನಗರದಲ್ಲಿ ಅಪಘಾತಕ್ಕೀಡಾಗಿದ್ದ ಸುದ್ದಿ ಈಗ ಹಳತಾಗಿರಬಹುದು, ಆದರೆ ಆ ವಿಮಾನದಲ್ಲಿ ಪಾಕಿಸ್ತಾನಿ ಸೂಪರ್ ಮಾಡೆಲ್ ಜರಾ ಅಬಿದ್ ಕೂಡ ಇದ್ದರು ಎಂಬುದು ಈಗಿನ ಹೊಸ ಸುದ್ದಿ.
ದಕ್ಷಿಣ ಪಾಕಿಸ್ತಾನದ ಕರಾಚಿ ನಗರದಲ್ಲಿ ಈ ಶುಕ್ರವಾರ ನಡೆದ ವಿಮಾನ ಅಪಘಾತದಲ್ಲಿ ಮೃತಪಟ್ಟ 96 ಜನರಲ್ಲಿ ಪಾಕಿಸ್ತಾನದ ಸೂಪರ್ ಮಾಡೆಲ್ ಜರಾ ಅಬಿದ್ ಕೋಡಾ ಒಬ್ಬರೆಂದು ಧೃಡಪಟ್ಟ ಹಿನ್ನೆಲೆಯಲ್ಲಿ ಮಾಡೆಲಿಂಗ್ ಜಗತ್ತು ಶೋಕ ಸಾಗರದಲ್ಲಿ ಮುಳುಗಿದೆ.
ಅಪಘಾತದ ಸುದ್ದಿ ಮಾಧ್ಯಮಗಳಲ್ಲಿ ಹರಡಲು ಪ್ರಾರಂಭಿಸಿದ ನಂತರ, ಮಾಡೆಲ್ ಜರಾಳೊಂದಿಗೆ ಕೆಲಸ ಮಾಡಿದ ಅನೇಕ ಜನರು ಜರಾ ಅಬಿದ್ ವಿಮಾನದಲ್ಲಿದ್ದರು ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ‘ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಪತ್ರಿಕೆ’ ಅಧಿಕೃತ ಮೂಲಕ ಪಡೆದ ಪಟ್ಟಿಯಲ್ಲಿ ಆ ಹೆಸರಿನ ಮಹಿಳೆಯೊಬ್ಬಳು ವಿಮಾನ ಹತ್ತಿದರೆಂದು ದೃಡ ಪಡಿಸಿತು.
“ಜರಾ ಅಬಿದ್ @SanaSafinaz @catwalk_cares ಶೋಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಆಕೆಯ ಚಿಕ್ಕಪ್ಪ ತೀರಿಕೊಂಡನಂತರ ಅವರು ಲಾಹೋರ್ ನಲ್ಲಿದ್ದರು. ಇದು ನನಗೆ ತುಂಬಾ ಸಂಕಟದ ವಿಷಯವಾಗಿದೆ. ಜರಾಳ ಸಾವು ಫ್ಯಾಷನ್ ಉದ್ಯಮ ಅನಾಥವಾದಂತಿದೆ.ಹೀಗೆ ಎಷ್ಟೋ ಜೀವಗಳು ಕಳೆದುಹೋಗಿವೆ! ಪ್ರಾರ್ಥನೆಗಳು ”, ಎಂದು ಸಹ ನೃತ್ಯ ಸಂಯೋಜಕರೊಬ್ಬರು ಅತೀವ ನೋವಿನಿಂದ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243