ಲೈಫ್ ಸ್ಟೈಲ್

ರೆಸಿಪಿ | ಪಾಲಕ್ ರೈಸ್ ಹೀಗೆ ಮಾಡ್ಕೊಳಿ, ತಿನ್ಕೊಳಿ

Published

on

ಪಾಲಕ್ ಸೊಪ್ಪು ಎಲ್ಲರ ಆರೋಗ್ಯಕ್ಕೂ ಬಹಳ ಮುಖ್ಯ. ಅದರಲ್ಲೂ ಮಕ್ಕಳ ಆರೋಗ್ಯಕ್ಕೆ ಬಹಳ ಅವಶ್ಯಕ. ನಾವು ಪಾಲಕ್ ಸೊಪ್ಪನ್ನ ಬಳಸಿ ವಿವಿಧ ಬಗೆಯ ಅಡುಗೆಗಳನ್ನ ಮಾಡುತ್ತೇವೆ . ಇದರಲ್ಲಿ ಹೆಚ್ಚಿನ ಕಬ್ಬಿನಾಂಶ ಮತ್ತು ಪ್ರೊಟೀನ್ ಗಳಿದ್ದು ಉತ್ತಮ ಆರೋಗ್ಯಕ್ಕೆ ಸಹಾಯ ಮಾಡುತ್ತವೆ. ಹಾಗಾದರೆ ಬನ್ನಿ ಪಾಲಕ್ ಸೊಪ್ಪನ್ನ ಬಳಸಿ ಪಾಲಕ್ ರೈಸ್ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ.

ಬೇಕಾಗುವ ಪದಾರ್ಥಗಳು

  • ಅನ್ನ – 2 ಕಪ್
  • ಪಾಲಕ್ ಸೊಪ್ಪು – ಒಂದು ದೊಡ್ಡ ಕಪ್
  • ಈರುಳ್ಳಿ – 1
  • ಹಸಿ ಮೆಣಸಿನ ಕಾಯಿ – 3/೪
  • ಚಕ್ಕೆ – ಒಂದು ತುಂಡು
  • ಕರಿಮೆಣಸು -2/3
  • ಲವಂಗ – 2
  • ಸಾಸಿವೆ, ಜೀರಿಗೆ – ಒಂದೊಂದು ಚಮಚ
  • ಗೋಡಂಬಿ – ಅರ್ಧ ಕಪ್
  • ನಿಂಬೆ ಹಣ್ಣು – 1
  • ಉಪ್ಪು – ರುಚಿಗೆ ತಕಸ್ತು
  • ಎಣ್ಣೆ – ಸ್ವಲ್ಪ

ಮಾಡುವ ವಿಧಾನ

ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ ಅದಕೆ ಸಾಸಿವೆ, ಜೀರಿಗೆ, ಕತ್ತರಿಸಿನ ಮೆಣಸಿನ ಕಾಯಿ, ಈರುಳ್ಳಿಯನ್ನು ಹಾಕಿ ಹುರಿಯಿರಿ. ನಂತರ ಸಣ್ಣಗೆ ಕತ್ತರಿಸಿಕೊಂಡ ಪಾಲಕ್ ಸೊಪ್ಪನ್ನು ಹಾಕಿ ಹುರಿಯಬೇಕು. ಅದಕ್ಕೆ ಅರ್ಧ ಕಪ್ ನಿರಿ ಸೇರಿಸಿ ಕುದಿಯಲು ಬಿಡಿ. ಇನ್ನೊಂದೆಡೆ ಮಿಕ್ಸಿ ಜಾರ್ ಗೆ ಕರಿಮೆಣಸು, ಲವಂಗ ಚಕ್ಕೆ ಗೋಡಂಬಿಯನ್ನ ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣವನ್ನು ಒಂದು ಬಾಣಲೆಗೆ ಹಾಕಿ ಸ್ವಲ್ಪ ಎಣ್ಣೆ ಹಾಕಿ ಹುರಿದುಕೊಳ್ಳಿ.

ನಂತರ ಪಾಲಕ್ ಸೊಪ್ಪಿನ ಮಿಶ್ರಣ ಹಾಗು ರುಬ್ಬಿದ ಮಿಶ್ರಣವನ್ನ ಒಟ್ಟಿಗೆ ಸೇರಿಸಿ ಸ್ವಲ್ಪ ಉಪ್ಪನ್ನ ಹಾಕಿ ಒಂದೆರಡು ನಿಮಿಷದ ನಂತರ ವಾಲೆಯನ್ನು ಆರಿಸಿ. ತಯಾರಿರುವ ಅನ್ನಕ್ಕೆ ಈ ಮಿಶ್ರಣವನ್ನ ಕಲಸಿ ಅದಕ್ಕೆ ನಿಂಬೆ ಹುಲಿಯನ್ನು ಹಿಂಡಿಕೊಂಡರೆ ಪಾಲಕ್ ರೈಸ್ ಸವಿಯಲು ಸಿದ್ದ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version