ದಿನದ ಸುದ್ದಿ
ಪಂಪ ಪ್ರಶಸ್ತಿ ಪುರಸ್ಕೃತ ಡಾ. ಬಿ.ಎ.ಸನದಿ ನಿಧನ : ಸಂಜೆ ಅಂತಿಮ ಕಾರ್ಯ
ಸುದ್ದಿದಿನ, ಕಾರವಾರ : ಖ್ಯಾತ ನಾಟಕಕಾರ, ಕವಿ, ವಾಗ್ಮಿ, ನಿರ್ದೇಶಕ ಹಿರಿಯ ಸಾಹಿತಿ,ಪಂಪ ಪ್ರಶಸ್ತಿ ಪುರಸ್ಕೃತ ಡಾ. ಬಿ.ಎ.ಸನದಿಯವರು(ಬಾಬಾಸಾಹೇಬ ಅಹಮದ್ ಸಾಹೇಬ ಸನದಿ) ಇಂದು (ಭಾನುವಾರ) ಬೆಳಗಿನ ಜಾವ ಉತ್ತರಕನ್ನಡ ಜಿಲ್ಲೆಯ ಕುಮಟದ ನಿವಾಸದಲ್ಲಿ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾರೆ. ಬಿ.ಎ. ಸನದಿ ಯವರಿಗೆ 86 ವರ್ಷ ವಯಸ್ಸಾಗಿತ್ತು.
ಬಿ. ಎ. ಸನದಿಯವರು ಬೆಳಗಾವಿಯ ಶಿಂದೊಳ್ಳಿ ಗ್ರಾಮದಲ್ಲಿ ಆಗಸ್ಟ್ 18,1933 ರಂದು ಅಹಮದ್ ಸಾಹೇಬ ಮತ್ತು ಆಯಿಶಾಬಿ ಅವರ ಪುತ್ರನಾಗಿ ಜನಿಸಿದರು. ಇವರಿಗೆ ನಿಸಾರ ಎಂಬ ಮಗ ಇದ್ದಾರೆ. ಇಂದು ಸಂಜೆ ಸನದಿಯವರ ಕೊನೆ ಕಾರ್ಯ ನಡೆಸಲಾಗುವುದೆಂದು ಕುಟುಂಬ ಮೂಲಗಳು ತಿಳಿಸಿವೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401