ದಿನದ ಸುದ್ದಿ

ನಿವೃತ್ತ‌ ಪೊಲೀಸ್ ಅಧಿಕಾರಿಯನ್ನು ಹಾಡುಹಗಲೇ ಕೊಂದ ದುಷ್ಕರ್ಮಿಗಳು..!

Published

on

ಸುದ್ದಿದಿನ ಡೆಸ್ಕ್ : ಉತ್ತರ ಪ್ರದೇಶದ ಅಲಹಾಬಾದ್ ನಲ್ಲಿ ಮೂವರು ದುಷ್ಕರ್ಮಿಗಳು ನಿವೃತ್ತ ಪೊಲೀಸ್ ಅಧಿಕಾರಿಯನ್ನು ಬೆನ್ನಟ್ಟಿ ಕೊಂದ ಘಟನೆಯು ನಡೆದಿದೆ. ಈ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದೆ.

70 ವರ್ಷದ ಅಬ್ದುಲ್ ಸಮದ್ ಖಾನ್ ಎಂಬ ನಿವೃತ್ತ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅವರನ್ನು ಹಾಡು ಹಗಲೇ ಕೊಂದ ಘಟನೆಯು ಹಾಡುಹಗಲೇ ನಡೆದಿದೆ. ಈ ಸಂದರ್ಭದಲ್ಲಿ ಸಾರ್ವಜನಿಕರು ಘಟನೆ ನೋಡಿಯೂ ಸಹಾಯಕ್ಕೆ ಬಂದಿಲ್ಲ. ತುಂಬಾ ರಕ್ತಸ್ರಾವವಾಗಿದ್ದರಿಂದ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಘಟನೆ ವಿವರ

ಕೆಂಪು ಅಂಗಿ ಉಟ್ಟಿದ್ದ ದುಷ್ಕರ್ಮಿಯೊಬ್ಬ ಸೈಕಲ್ ಮೇಲೆ ಬರುತ್ತಿದ್ದ ಪೊಲೀಸ್ ಅಧಿಕಾರಿಗೆ ಹಿಂದಿನಿಂದ ಬಂದವನೇ ಏಕಾಏಕಿ ದಪ್ಪನೆಯ ಕೋಲಿನಿಂದ ಹೊಡೆದಿದ್ದಾನೆ. ಈ ಸಂದರ್ಭ ಪೊಲೀಸ್ ಅಧಿಕಾರಿ ಸಮದ್ ಅಲ್ಲಿದ್ದ ಪಕ್ಕದ ಗೋಡೆಯ ಹತ್ತಿರ ಕುಸಿದು ಬಿದ್ದಿದ್ದಾರೆ. ಆಕೋಡಲೇ ಮತ್ತಿಬ್ಬರು ದುಷ್ಕರ್ಮಿಗಳು ಹಿಂದು ಮನಸೋಇಚ್ಚೆ ಸಮದ್ ಅವರನ್ನು ಥಳಿಸಿದ್ದಾರೆ. ಇದರ ಪರಿಣಾಮ ರಕ್ತಸ್ರಾವ ಹೆಚ್ಚಾಗಿ ಸಮದ್ ಅಲ್ಲೇ ಕುಸಿದುಬಿದ್ದಿದ್ದಾರೆ. ಸಮದ್ ಅವರ ಮೇಲೆ ಹಲ್ಲೆ ಮಾಡಿದವರ ಪೈಕಿ ಒಬ್ಬನ ಹೆಸರು ಜುನೈದ್ ಆಗಿದ್ದು , ಈತನ ಮೇಲೆ 10 ಪ್ರಕರಣಗಳು ದಾಖಲಾಗಿವೆ. ಈತ ಕ್ರಿಮಿನಲ್ ಹಿನ್ನೆಲೆ ಉಳ್ಳವನಾಗಿದ್ದಾನೆ. ಈ ಪ್ರಕರಣಕ್ಕೆ ಕಾರಣ ಕುಟುಂಬ ಆಸ್ತಿವಿಚಾರ ವಿರಬಹುದೆಂದು ಶಂಕಿಸಲಾಗಿದ್ದು, 10 ಮಂದಿಯ ವಿರುದ್ಧ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಳ್ಳಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version