ದಿನದ ಸುದ್ದಿ
ಡಾ. ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಸಮಾಜಿರ್ಪಿತ ಕಾರ್ಯಕ್ಕೆ 41 ವಸಂತಗಳ ಸಂಭ್ರಮ
ಸುದ್ದಿದಿನಡೆಸ್ಕ್:ರಂಗಜಂಗಮರಾಗಿ,ನ್ಯಾಯನಿಷ್ಠುರಿಗಳಾಗಿ,ಸಾಹಿತ್ಯ ಸಂಸ್ಕೃತಿಯ ಸಂವರ್ಧಕರಾಗಿ,ಹತ್ತಾರು ಕ್ಷೇತ್ರಗಳ ಯಶಸ್ವಿ ಸಮಾಜಮುಖಿ ಕಾರ್ಯಗಳಲ್ಲಿ ನಿತ್ಯವೂ ಜಗದೊಳಿಗಾಗಿ ಶುದ್ದಾಂತಕರಣದಿ ತ್ರಿಕಾಲ ಕಾರ್ಯನಿಷ್ಟರಾಗಿ ಲೋಕದ ತರಳರ ಬಾಳಿಗೆ ಅಹರ್ನಿಶಿ ಶ್ರಮ ತಪಸ್ವಿ ಅಭಿಧಾನದ ಪೂಜನೀಯ ಶ್ರೀ ಶ್ರೀ ಶ್ರೀ ಡಾ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಪಟ್ಟಾಧ್ಯಕ್ಷರು ಶ್ರೀ ತರಳಬಾಳು ಜಗದ್ಗುರು ಶಾಖಾಮಠ ಸಾಣೆಹಳ್ಳಿ ಪಟ್ಟಾಭಿಷಕ್ತರಾಗಿ ಇಂದಿಗೆ 41 ವಸಂತಗಳು ತುಂಬಿದ ಅಪೂರ್ವ ದಿನವಾಗಿದೆ.
ಇಂದು ( ದಿನಾಂಕ 25/12/1977 ರಂದು ಪರಮಪೂಜ್ಯ ಶ್ರೀ ಗಳಿಗೆ ಪಟ್ಟಾಭಿಷೇಕವಾಗಿತ್ತು.) ನಾಡಿನ ಅಸಂಖ್ಯಾತ ಭಕ್ತ ಸಮುದಾಯದ ನಮನಗಳೊಂದಿಗೆ , ಬಸವಾದಿ ಮರುಳಸಿದ್ದರ ವರಗುರು ಶಿವಕುಮಾರ ಪ್ರಭುವಿನ ಪ್ರತ್ಯಕ್ಷ ದೇವಸ್ವರೂಪಿ ಶ್ರೀ ತರಳಬಾಳು ಜಗದ್ಗುರು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಗಳ ದಿವ್ಯ ಮಾರ್ಗದರ್ಶನದ ಆಶೀರ್ವಾದ ಸದಾ ಇರಲಿ.
ಸುದ್ದಿದಿನ.ಕಾಂ|ವಾಟ್ಸಾಪ್|9986715401