ಲೈಫ್ ಸ್ಟೈಲ್
ರೆಸಿಪಿ | ಹೆಸರು ಬೇಳೆ ಪನ್ನೀರ್ ಸಾಗು
ರುಚಿ ರುಚಿಯಾದ ಹೆಸರು ಬೇಳೆ ಸಾಗು ಮಾಡಲು ಬೇಕಾಗುವ ಸಾಮಗ್ರಿಗಳು.
ಹೆಸರುಬೇಳೆ 1 ಕಪ್
ಪನೀರ್ 1/2 ಕಪ್
ಕ್ಯಾಪ್ಸಿಕಂ
ಈರುಳ್ಳಿ 1
ಟೊಮೊಟೊ 1
ಕಾರ್ನ್ ಫ್ಲೋರ್ 1 ಚಮಚ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಗರಂ ಮಸಾಲ
ಚಾಟ್ ಮಸಾಲ
ಧನಿಯಾ ಪುಡಿ
ಅಚ್ಚ ಖಾರದಪುಡಿ
ಜೀರಾ ಪುಡಿ
ಉಪ್ಪು
ಎಣ್ಣೆ
ಕೊತ್ತಂಬರಿ ಸೊಪ್ಪು
ಕಸೂರಿ ಮೆಹತಿ
ಅರಿಶಿನ
ಹಸಿಮೆಣಸಿನಕಾಯಿ
ಹೆಸರು ಬೇಳೆ ಸಾಗು ಮಾಡುವ ವಿಧಾನ
- ಮೊದಲು ಹೆಸರುಬೇಳೆ ಬೇಯಿಸಿಕೊಳ್ಳಿ.
- ಪ್ಯಾನ್ ಗೆ ಎಣ್ಣೆ ಹಾಕಿ ಈರುಳ್ಳಿ ಹಾಕಿ ಫ್ರೈ ಮಾಡಿ. ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಸಿಮೆಣಸಿನಕಾಯಿ ಹಾಕಿ ಫ್ರೈ ಮಾಡಿ.
- ಕ್ಯಾಪ್ಸಿಕಂ ಹಾಕಿ ಬಾಡಿಸಿ ಟೊಮೊಟೊ ಹಾಕಿ 2 ನಿಮಿಷ ಫ್ರೈ ಮಾಡಿ ಇದಕ್ಕೆ ಗರಂಮಸಾಲ, ಧನಿಯಾಪುಡಿ, ಜೀರಪುಡಿ, ಅರಿಸಿನ, ಚಾಟ್ ಮಸಾಲ, ಖಾರಪುಡಿ ಹಾಕಿ ಸ್ವಲ್ಪ ನೀರು ಹಾಕಿ ಕುದಿಸಿ.
- ಮಸಾಲ ಕುಡ್ದ ನಂತರ ಕಾರ್ನ್ ಫ್ಲೋರ್ ಹಾಕಿ ಮಿಕ್ಸ್ ಮಾಡಿ ಬೆಂದ ಹೆಸರು ಬೇಳೆ ಹಾಕಿ ಮಿಕ್ಸ್ ಮಾಡಿ ಪನೀರ್, ಉಪ್ಪು ಹಾಕಿ 5 ನಿಮಿಷ ಕುದಿಸಿ.
- ನಂತರ ಕೊತ್ತಂಬರಿ ಕಸೂರಿ ಮೆತಿ ಹಾಕಿ ಮಿಕ್ಸ್ ಮಾಡಿ.
ಇದು ಪೂರಿ ಚಪಾತಿ ಜೊತೆ ತಿನ್ನಲು ತುಂಬಾ ರುಚಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243