ಲೈಫ್ ಸ್ಟೈಲ್

ಪಪ್ಪಾಯಿ ಹಣ್ಣಿನಲ್ಲಿವೆ ಈ ಐದು ಔಷಧಿ ಗುಣ !

Published

on

ಪರಂಗಿ ಹಣ್ಣು (ಪಪ್ಪಾಯಿ ಹಣ್ಣು ) ನಿಸರ್ಗದಲ್ಲಿ ಹೇರಳವಾಗಿ ಬೆಳೆಯುವ ಫಲ. (papaya fruit benefits in kannada) ರುಚಿಯ ಕಾರಣಕ್ಕೆ ಬಹುತೇಕರಿಗೆ ಇಷ್ಟವಾಗುವ ಪರಂಗಿ ಹಣ್ಣು (ಪಪ್ಪಾಯಿ ಹಣ್ಣು ) ಹಲವು ಔಷಧೀಯ ಗುಣ ಹೊಂದಿದೆ. ಜಠರದಲ್ಲಿರುವ ದುಂಡು ಹುಳಗಳ ನಾಶಕ್ಕೆ ಪರಂಗಿ ಕಾಯಿಯನ್ನು ಸಕ್ಕರೆಯೊಂದಿಗೆ ಸೇವಿಸುವ ಪದ್ಧತಿ ಇದೆ.
ಹಣ್ಣಿನ ಸೇವನೆನಿಂದ ದೇಹಕ್ಕೆ ತಂಪು. ಜೇನಿನ ಜತೆ ಪರಂಗಿ ಹಣ್ಣಿನ (ಪಪ್ಪಾಯಿ ಹಣ್ಣು ) ಸೇವನೆ ಮಾಡುವುದರಿಂದ ಪೌಷ್ಟಿ ಲಭಿಸುತ್ತದೆ. ಮಕ್ಕಳಿಗೆ, ಗರ್ಭಿಣಿಯರಿಗೆ ಶಕ್ತಿ ನೀಡುತ್ತದೆ. ಹೃದಯ ಹಾಗೂ ನರಗಳ ದೌರ್ಬಲ್ಯದಿಂದ ನರಳುವವರಲ್ಲಿ ಹೊಸ ಚೈತನ್ಯ ತುಂಬುತ್ತದೆ.

 

ಪಪ್ಪಾಯಿ ಹಣ್ಣಿನಲ್ಲಿವೆ (ಪರಂಗಿ ಹಣ್ಣು) ಈ ಐದು ಔಷಧಿ ಗುಣ (papaya benefits kannada)

 

1. ಮಲಬದ್ಧತೆ ನಿವಾರಕ:

ಪರಂಗಿ ಕಾಯಿಯನ್ನು ಸಣ್ಣಗೆ ಹೋಳುಮಾಡಿ ಅದಕ್ಕೆ ಕಾಳು ಮೆಣಸಿನ ಪುಡಿ, ಜೀರಿಗೆ, ಉಪ್ಪು ಮತ್ತು ನಿಂಬೆರಸ ಸೇರಿಸಿ ತಿಂದರೆ ಮಲಬದ್ಧತೆ ಕಡಿಮೆ ಆಗುತ್ತದೆ.

2. ಜಂತು ನಿವಾರಕ:

ಹಿಂದೆ ಮಕ್ಕಳಲ್ಲಿ ಜಂತು ಹುಳುಗಳ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತಿತ್ತು. ಹೆಚ್ಚು ಸಿಹಿ ಸೇವಿಸಿದರೆ ಜಂತು ಹುಳು ಕಾಣಿಸಿಕೊಳ್ಳುತ್ತವೆ. ಪರಂಗಿ ಕಾಯಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಜಂತುಹುಳು ನಿವಾರಣೆ ಯಾಗುತ್ತವೆ. ಊಟಕ್ಕೆ ಮುಂಚೆ ಮೂವತ್ತು ಪರಂಗಿ ಬೀಜಗಳನ್ನು ಹಣ್ಣಿನ ತಿರುಳಿನೊಂದಿಗೆ ಸೇವಿಸುವುದರಿಂದ ಕೂಡ ಜಂತು ನಿವಾರಣೆ ಆಗುತ್ತವೆ.

 

3. ಪಪ್ಪಾಯಿ ಹಣ್ಣು ನರ ದೌರ್ಬಲ್ಯ ಸಮಸ್ಯೆ ನಿವಾರಕ:

ಪರಂಗಿ ಹಣ್ಣಿನ (ಪಪ್ಪಾಯಿ ಹಣ್ಣು ) ಜತೆ ಹಾಲು, ಜೇನು ಮಿಶ್ರಣ ಮಾಡಿ ನಿತ್ಯ ಸೇವಿಸುವುದರಿಂದ ಚೈತನ್ಯ ಹೆಚ್ಚಿ ನರಗಳ ಹಾಗೂ ಹೃದಯ ದೌರ್ಬಲ್ಯ ಕಡಿಮೆಯಾಗುತ್ತದೆ.

4. ಜೀರ್ಣಶಕ್ತಿ ವೃದ್ಧಿಗೆ ರಾಮಬಾಣ ಪಪ್ಪಾಯಿ ಹಣ್ಣು

ಊಟವಾದ ನಂತರ ಪರಂಗಿ ಹಣ್ಣಿನ (ಪಪ್ಪಾಯಿ ಹಣ್ಣು ) ಸೇವನೆ ಮಾಡುವ ಅಭ್ಯಾಸ ರೂಢಿಸಿಕೊಂಡರೆ ಜೀರ್ಣಶಕ್ತಿ ವೃದ್ಧಿಸುತ್ತದೆ. ಪರಂಗಿ ಗಿಡದ ಎಲೆಗಳನ್ನು ಕಿತ್ತು ತೊಳೆದು ತಿನ್ನುವುದರಿಂದ ಕರುಳಿನಲ್ಲಿರುವ ಕ್ರಿಮಿಗಳು ನಾಶವಾಗುತ್ತವೆ.

5. ಪರಂಗಿ ಹಣ್ಣಿನ (ಪಪ್ಪಾಯಿ ಹಣ್ಣು ) ಸೇವನೆಯಿಂದ ಮೂಲವ್ಯಾದಿ ಹಾಗೂ ಯಕೃತ್ ದೋಷಗಳು ಕೂಡ ನಿವಾರಣೆಯಾಗುತ್ತವೆ.

Trending

Exit mobile version