ಕ್ರೀಡೆ

ಪ್ಯಾರಾ ವಿಶ್ವಕಪ್ ಶೂಟಿಂಗ್ ಚಾಂಪಿಯನ್‌ಶಿಪ್‌ ; ಭಾರತದ ಶೂಟರ್ ಅವನಿ ಲೇಖರಾ ಗೆ 2ನೇ ಚಿನ್ನದ ಪದಕ

Published

on

ಸುದ್ದಿದಿನ ಡೆಸ್ಕ್ : ಭಾರತದ ಅವನಿ ಲೇಖರಾ ಚಾಟ್ಯೂರಾಕ್ಸ್-2022 ಪ್ಯಾರಾ ವಿಶ್ವಕಪ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ೨ನೇ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

ನಿನ್ನೆ ನಡೆದ ಆರ್-8 ವಿಭಾಗದ ಮಹಿಳೆಯರ 50 ಮೀಟರ್ ರೈಫಲ್-3 ಪೊಸಿಷನ್ ಎಸ್ ಎಚ್ 1 ಸ್ಪರ್ಧೆಯಲ್ಲಿ ಅವನಿ ಲೇಖರಾ ಚಿನ್ನದ ಪದಕ ಜಯಿಸಿದರು.

ಫೈನಲ್‌ನಲ್ಲಿ ಅವರು ಸ್ಲೋವಾಕಿಯಾದ ವೆರೋನಿಕಾ ವಡೋವಿಕೋವಾ ಅವರನ್ನು 458.3 ಅಂಕಗಳಿಂದ ಸೋಲಿಸಿ ಈ ಸಾಧನೆ ಮಾಡಿದರು.

ಭಾರತದ ಶೂಟರ್ ಅವನಿ ಲೇಖರಾ 2ನೇ ಚಿನ್ನದ ಪದಕ ಗೆದ್ದುಕೊಂಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಅಭಿನಂದನೆ ಸಲ್ಲಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ, ರಾಷ್ಟ್ರವು ಅವನಿ ಅವರ ಸಾಧನೆಯ ಬಗ್ಗೆ ಹೆಮ್ಮೆ ಪಡುತ್ತದೆ ಎಂದು ಹೇಳಿದ್ದಾರೆ. ಅವನಿ ಸಾಧನೆ ದೇಶಕ್ಕೆ ಹೆಮ್ಮೆ ತಂದುಕೊಟ್ಟಿದ್ದು, ಕ್ರೀಡಾ ಕ್ಷೇತ್ರದಲ್ಲಿ ಭಾರತದ ಉತ್ತಮ ಪ್ರದರ್ಶಣಕ್ಕೆ ಮತ್ತೊಂದು ಸಾಕ್ಷಿಯಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version