ದಿನದ ಸುದ್ದಿ

ಭಾಗ-2 | ದೆಹಲಿ ಹೋರಾಟದ ಕೆಲವು ಅಸಲೀ ಸಂಗತಿಗಳು; ಕಿಸಾನ್ ಮೋರ್ಚಾ ಏನು ಹೇಳುತ್ತಿದೆ..?

Published

on

ಮುಂದುವರಿದ ಭಾಗ

ಪ್ರಶ್ನೆ: ಜನವರಿ 26ರಂದು ದೆಹಲಿಯೊಳಕ್ಕೆ ನುಗ್ಗಿ ಹೋದವರ ಕುರಿತು ಸಂಯುಕ್ತ್ ಕಿಸಾನ್ ಮೋರ್ಚ ನೆಗೆಟಿವ್ ಆಗಿ ಏಕೆ ಮಾತಾಡಿತು? ಕೆಂಪುಕೋಟೆಯ ಮೇಲೆ ಬಾವುಟ ಹಾರಿಸಿದರೆ ಏನು ತಪ್ಪು? ಇದರಲ್ಲಿ ಹುನ್ನಾರವಿದೆ ಎಂದು ಏಕೆ ಹೇಳಿದರು?

60 ದಿನಗಳ ಕಾಲ ಕೊರೆಯುವ ಚಳಿಯಲ್ಲಿ ಬೀದಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ನಿಭಾಯಿಸುತ್ತಾ ಹೋರಾಟವೊಂದನ್ನು ನಡೆಸುತ್ತಾ ಹೋಗುವುದು ಬಹಳ ಸಂಕೀರ್ಣವಾದ ಜವಾಬ್ದಾರಿ. ಇದರ ಜೊತೆಗೆ ಕನಿಷ್ಠ ಒಂದೂವರೆ ಲಕ್ಷ ಟ್ರ್ಯಾಕ್ಟರ್ಗಳ, ಅಂದರೆ ಸುಮಾರು 5 ಲಕ್ಷ ಜನರು ಬಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿ ಮಾಡುವುದನ್ನು ಯೋಜಿಸಿದ್ದು ಇದೇ ಸಂಯುಕ್ತ್ ಕಿಸಾನ್ ಮೋಚರ್ಾ. ಸುಪ್ರೀಂಕೋರ್ಟ್ ಸೇರಿದಂತೆ ಯಾರೂ ಅದಕ್ಕೆ ಹಸಿರು ನಿಶಾನೆ ತೋರಿಸಿರಲಿಲ್ಲ.

ಒಂದು ಹಂತದಲ್ಲಿ ಸುಪ್ರೀಂಕೋರ್ಟ್ ಇದರ ಬಗ್ಗೆ ಉಲ್ಟಾ ಮಾತಾಡಿತ್ತು. ಆದರೆ ಅಂತಿಮವಾಗಿ ದೆಹಲಿ ಪೊಲೀಸರ ಜೊತೆ ನಡೆದ ಮಾತುಕತೆಯಲ್ಲಿ ಕೆಲವು ನಿರ್ದಿಷ್ಟ ಮಾರ್ಗಗಳ ಕುರಿತು ಪರಸ್ಪರ ಒಪ್ಪಿಗೆಗೆ ಬರಲಾಯಿತು. ಒಂದು ವೇಳೆ ಈ ಟ್ರ್ಯಾಕ್ಟರ್ ಮಾಚರ್್ ಸಂಪೂರ್ಣ ಅಂದುಕೊಂಡ ಹಾಗೆ ನಡೆದಿದ್ದರೆ 26ರ ಹಗಲು, ರಾತ್ರಿ ಅಷ್ಟೇ ಅಲ್ಲದೇ 27ರ ಬೆಳಿಗ್ಗೆಯವರೆಗೂ ಟ್ರ್ಯಾಕ್ಟರ್ ಸಾಲು ಮುಗಿಯುತ್ತಿರಲಿಲ್ಲ.

ಇದಲ್ಲದೇ ಫೆಬ್ರವರಿ 1ಕ್ಕೆ ಶಾಂತಿಯುತವಾಗಿ ಪಾಲರ್ಿಮೆಂಟ್ ಚಲೋವನ್ನೂ, ಜನವರಿ 25ರಂದು ಘೋಷಿಸಲಾಗಿತ್ತು. ಬಜೆಟ್ ಅಧಿವೇಶನ ಶುರುವಾಗುವ ದಿನ (26ಕ್ಕೆ ಬಂದವರಲ್ಲೂ ಲಕ್ಷಾಂತರ ಜನರು ಉಳಿದುಕೊಂಡು) ಪಾರ್ಲಿಮೆಂಟ್ ಚಲೋ ನಡೆಸುವುದು ಅವರ ಉದ್ದೇಶವಾಗಿತ್ತು. ಆದರೆ, ಈ ಮಧ್ಯೆ ಮಜ್ದೂರ್ ಕಿಸಾನ್ ಸಂಘರ್ಷ ಕಮಿಟಿಯ ಕಡೆಯಿಂದ ಜನವರಿ 25ರಂದೇ ವಿಡಿಯೋ ಬಿಡುಗಡೆ ಮಾಡಿ ತಾವು ಜನವರಿ 26ರಂದು ಪೂರ್ವನಿಗದಿತ ಮಾರ್ಗದಲ್ಲಿ ಹೋಗುವುದಿಲ್ಲವೆಂದು ಘೋಷಿಸಿಯಾಗಿತ್ತು.

ಜೊತೆಗೆ ತಾವು ರಿಂಗ್ ರಸ್ತೆಯಲ್ಲೇ ಹೋಗುತ್ತೇವೆಂತಲೂ, ಕೆಂಪುಕೋಟೆಯ ಮೇಲೆ ಬಾವುಟ ಹಾರಿಸುತ್ತೇವೆಂತಲೂ ಹೇಳಿದ್ದರು. ಅವರು ಹಿಂದಿನಿಂದಲೂ ಸಂಯುಕ್ತ್ ಕಿಸಾನ್ ಮೋರ್ಚಾದಲ್ಲಿರಲಿಲ್ಲ. ಜೊತೆಗೆ ದೀಪ್ ಸಿಧುವೂ ಸಂಯುಕ್ತ್ ಕಿಸಾನ್ ಮೋರ್ಚಾದ ಭಾಗವಲ್ಲ.

ಆತ ಸದಾಕಾಲ ಇಲ್ಲಿನ ಸುಸಂಘಟಿತ ವಿಧಾನವನ್ನು ಹಾಳುಮಾಡುವ ಕೆಲಸ ಮಾಡುತ್ತಲೇ ಇದ್ದರು. ಒಂದು ಹಂತದಲ್ಲಿ ರೈತ ನಾಯಕರೊಬ್ಬರು ಈತ ಮತ್ತು ಈತನ ಗೆಳೆಯ ಲಖಾ ಸಿಧಾನಾ (ಈತ ಹಿಂದೆ ಗ್ಯಾಂಗ್ಸ್ಟರ್ ಆಗಿದ್ದು, ಈಗ ಸಾಮಾಜಿಕ ಕಾರ್ಯಕರ್ತನೆಂದು ಹೇಳಿಕೊಳ್ಳುತ್ತಾನೆ) ಇಬ್ಬರೂ ಈ ಹೋರಾಟದ ಶತ್ರುಗಳು ಎಂದು ಘೋಷಿಸಿದ್ದರು.

ಇದಕ್ಕೆ ಕಾರಣ, ಬಿಜೆಪಿ ಜೊತೆಗೂ ಇದ್ದ ಈ ಇಬ್ಬರು ಖಲಿಸ್ತಾನದ ಪರವಾಗಿ ಮಾತನಾಡುವುದು, ಭಿಂದ್ರನ್ವಾಲೆಯ ಮಾತುಗಳನ್ನು ಉಲ್ಲೇಖಿಸುವುದನ್ನು ಮಾಡುತ್ತಲಿದ್ದರು. ಪತ್ರಕತರ್ೆ ಬಖರ್ಾದತ್ ನಡೆಸಿದ ಸಂದರ್ಶನವೊಂದರಲ್ಲೂ ಈತ ಆ ಮಾತುಗಳನ್ನಾಡಿರುವುದನ್ನು ಕೇಳಬಹುದು. ಜೊತೆಗೆ ಲಕ್ಷಾಂತರ ಜನರ ಮನಸ್ಥಿತಿ, ತಯಾರಿ ಹಾಗೂ ಗೆದ್ದುಕೊಂಡೇ ವಾಪಸ್ಸು ಹೋಗಬೇಕು ಎಂಬ ಸರ್ವಾನುಮತದ ಅಭಿಪ್ರಾಯಗಳಿಗೆ ವ್ಯತಿರಿಕ್ತವಾಗಿ ನಿರಂತರವಾಗಿ ವ್ಯಕ್ತಿಗತ ಅನಿಸಿಕೆಗಳನ್ನು ಮುಂದಿಡುವುದು ದೀಪ್ ಸಿಧು ಪ್ರವೃತ್ತಿಯಾಗಿತ್ತು. ಸಂಯುಕ್ತ್ ಕಿಸಾನ್ ಮೋಚರ್ಾದ ಸರ್ವಾನುಮತದಿಂದ ಅಭಿಪ್ರಾಯಕ್ಕೆ ವಿರುದ್ಧವಾಗಿ ಈ ವ್ಯಕ್ತಿ ಜನವರಿ 25ರಂದೂ ಜನರನ್ನು ಉದ್ರೇಕಗೊಳಿಸಲು ಪ್ರಯತ್ನಿಸಿದ್ದರು.

ದೀಪ್ ಸಿಧುವಷ್ಟೇ ಅಲ್ಲದೇ, ಮೇಲೆ ಹೇಳಲಾದ ಇನ್ನೊಂದು ಸಂಘಟನೆಯ ಜನರು ಸಿಂಘು ಬಾರ್ಡರ್ನಲ್ಲಿ ಸೇರಿಕೊಂಡಿದ್ದ ನಿದರ್ಿಷ್ಟ ಸ್ಥಳವೂ ಅನುಮಾನಾಸ್ಪದವಾಗಿತ್ತು. ಸಂಯುಕ್ತ್ ಕಿಸಾನ್ ಮೋಚರ್ಾದ ಅಡಿಯಲ್ಲಿ ಸಂಘಟಿತರಾಗಿರುವ ಲಕ್ಷಾಂತರ ರೈತರಿಗೂ ದೆಹಲಿಗೂ ಮಧ್ಯೆ ಬ್ಯಾರಿಕೇಡ್ಗಳಿದ್ದವು. ಆ ಬ್ಯಾರಿಕೇಡ್ಗಳೀಚೆ ದೆಹಲಿ ಪೊಲೀಸರಿದ್ದರು.

ಅವರಿಗೂ ಈಚೆ ಈ ಸಂಘಟನೆಗೆ ಪ್ರತಿಭಟನೆ ಶುರುವಾದ 13 ದಿನಗಳ ನಂತರ ವಿಶೇಷ ಟೆಂಟ್ಗಳ ಸೌಲಭ್ಯದೊಂದಿಗೆ ಇರಲು ಅವಕಾಶ ಕಲ್ಪಿಸಲಾಗಿತ್ತು. ಅವರ ಪಕ್ಕ ಸುಲಭದಲ್ಲಿ ತೆಗೆಯಬಹುದಾದ ಬ್ಯಾರಿಕೇಡ್ಗಳಿದ್ದವು. ಇವರು ಜನವರಿ 26ರಂದು ನಿಗದಿತ ಸಮಯಕ್ಕಿಂತ ಮುಂಚೆಯೇ ದೆಹಲಿಯೊಳಗೆ ಹೋದಂತೆ ಅಲ್ಲಲ್ಲಿ ಪೊಲೀಸರು ತಡೆದರಾದರೂ, ಅತ್ಯಂತ ಬಿಗಿ ಬಂದೋಬಸ್ತಿನ ಬದಲು ನಿಧಾನಕ್ಕೆ ಇವರನ್ನು ಒಳಕ್ಕೆ ಬಿಟ್ಟುಕೊಂಡಂತೆಯೇ ಕಂಡುಬಂದಿತು.

ಎಲ್ಲಕ್ಕಿಂತ ಮುಖ್ಯವಾಗಿ ಜನವರಿ 26ರಂದು ಸಾಮಾನ್ಯವಾಗಿಯೇ ಹೆಚ್ಚಿನ ಭದ್ರತೆ ಇರುವ ಕೆಂಪುಕೋಟೆಯ ಸುತ್ತ ಭದ್ರತೆ ಕಡಿಮೆ ಇತ್ತು. 50 ಜನರ ಗುಂಪು ಒಳಗೆ ಸುಲಭದಲ್ಲಿ ಪ್ರವೇಶಿಸಿ ಬಾವುಟ ಕಟ್ಟಲು ಅವರನ್ನು ಬಿಟ್ಟುಕೊಳ್ಳಲಾಯಿತು ಎಂಬುದು ಮೇಲ್ನೋಟಕ್ಕೇ ಕಂಡುಬರುತ್ತದೆ.

ಬಿಜೆಪಿ ಮತ್ತು ಈ ಜನರು ಮಾತಾಡಿಕೊಂಡು ಇದನ್ನು ಯೋಜಿಸಿದ್ದಾರಾ ಇಲ್ಲವಾ ಈಗಲೇ ಹೇಳಲು ಸಾಂದಭರ್ಿಕ ಸಾಕ್ಷ್ಯಗಳಿವೆಯೇ ಹೊರತು ಪುರಾವೆಗಳಿಲ್ಲ; ಆದರೆ ಅನುಮಾನಗಳಿವೆ. ಒಂದಂತೂ ಸ್ಪಷ್ಟ. ಸಂಯುಕ್ತ್ ಕಿಸಾನ್ ಮೋಚರ್ಾದ ಹೊರತಾದ ಒಂದು ಗುಂಪು ದೆಹಲಿಯೊಳಗೆ ಪೂರ್ವನಿಗದಿತವಲ್ಲದ ಮಾರ್ಗದಲ್ಲಿ ನುಗ್ಗಲಿದೆ ಎಂಬುದು ದೆಹಲಿ ಪೊಲೀಸರಿಗೆ ಗೊತ್ತಿತ್ತು. ಅವರ ಜೊತೆ ಮಾತಾಡುವ ಅಥವಾ ನಿಗ್ರಹಿಸುವ ಪ್ರಯತ್ನವನ್ನು ಅವರು ಮಾಡಲಿಲ್ಲ. ಅದು ಆಗಲಿ ಎಂದು ಬಿಟ್ಟುಕೊಂಡಿದ್ದು ಎದ್ದು ಕಾಣುತ್ತಿದೆ.

ಜನವರಿ 26ರ ಇಡೀ ಹೋರಾಟದ ಲಾಂಛನವಾಗಿ ತ್ರಿವರ್ಣಧ್ವಜ ಇರಲಿದೆ ಎಂದು ಸಂಯುಕ್ತ್ ಕಿಸಾನ್ ಮೋಚರ್ಾ ಮುಂಚೆಯೇ ಘೋಷಿಸಿತ್ತು. ಹಾಗೆಯೇ ಲಕ್ಷಾಂತರ ತ್ರಿವರ್ಣಧ್ವಜಗಳು ಹಾರಾಡಿದವು. ಆದರೆ ನಿದರ್ಿಷ್ಟವಾಗಿ ಬಾವುಟವನ್ನೇ ಬದಲಿಸಿ ಅದನ್ನು ಕೆಂಪುಕೋಟೆಯಲ್ಲೇ ಹೋಗಿ ಕಟ್ಟಿರುವುದರಲ್ಲಿ ಹುನ್ನಾರವಲ್ಲದೇ ಇನ್ನೇನೂ ಅಲ್ಲ ಎಂಬುದು ಸಂಯುಕ್ತ್ ಕಿಸಾನ್ ಮೋರ್ಚಾದ ಅಭಿಪ್ರಾಯ.

ಪ್ರಶ್ನೆ: ಜನವರಿ 26ರಂದು ಪೊಲೀಸರ ಜೊತೆಗೆ ನಿಗದಿಯಾದ ಸಮಯ ಹಾಗೂ ಮಾರ್ಗವನ್ನು ಬಿಟ್ಟು ದೆಹಲಿಯ ಕೇಂದ್ರ ಭಾಗ ಮತ್ತು ಕೆಂಪುಕೋಟೆಗೆ ಹೋದವರಲ್ಲಿ ಸಾಮಾನ್ಯ ರೈತರು ಹಾಗೂ ಸಂಯುಕ್ತ್ ಕಿಸಾನ್ ಮೋರ್ಚಾದವರಿರಲಿಲ್ಲವೇ?

ಉತ್ತರ: ಇದ್ದಿರಲು ಸಾಧ್ಯ. ಏಕೆಂದರೆ ಸದರಿ ಮಜ್ದೂರ್ ಕಿಸಾನ್ ಸಂಘರ್ಷ ಕಮಿಟಿ ಅಥವಾ ದೀಪ್ ಸಿಧುಗೆ ಇಷ್ಟೊಂದು ಬೆಂಬಲಿಗರಿಲ್ಲ. ಹಾಗಾಗಿ ಕೆಲವರು ಸಲೀಸಾಗಿ ರ್ಯಾಲಿ ಶುರು ಮಾಡಿದ್ದು ಮತ್ತು ಪೊಲೀಸರು ತಡೆಯದೇ ಇದ್ದದ್ದು ನೋಡಿ ಇನ್ನೊಂದಿಷ್ಟು ಜನರೂ ಹೊರಟಿರಬಹುದು. ಹಾಗೆ ಹೊರಟವರಿಗೆ ಕಳೆದ 60 ದಿನಗಳಿಂದ ಸರ್ಕಾರ ಪ್ರತಿಕ್ರಿಯಿಸದೇ ಇದ್ದುದನ್ನು ನೋಡಿ ಆಕ್ರೋಶವೂ ಇದ್ದಿರಬಹುದು. ಹಾಗಾಗಿ ಅವರುಗಳೂ ಇವರನ್ನು ಹಿಂಬಾಲಿಸಿ ಮುಂದಕ್ಕೆ ಹೋಗಿದ್ದಾರೆ. ಆದರೆ ಸಂಯುಕ್ತ್ ಕಿಸಾನ್ ಮೋರ್ಚಾ, ಹಿಂದೆ ನಿಗದಿಯಾಗಿದ್ದಂತೆ 12 ಗಂಟೆಗೆ ಪೆರೇಡ್ ಶುರು ಮಾಡಿತು ಮತ್ತು ಅದರಲ್ಲಿ ಲಕ್ಷಾಂತರ ಟ್ರ್ಯಾಕ್ಟರ್ಗಳಿದ್ದವು.

ಕೆಂಪುಕೋಟೆಯ ಬಳಿ ಒಳಗೆ ಹೋಗಿ ಧ್ವಜ ಹಾರಿಸಿದವರು ಮಾತ್ರ ಬಹಳ ಕಡಿಮೆ ಜನ. ಆ ಧ್ವಜ ಹಾರಿಸಿದ ರೀತಿಯು ಅಲ್ಲೇ ಹೊರಗೆ ಕೆಂಪುಕೋಟೆಯ ಆಚೆ ನಿಂತವರಿಗೂ ಇಷ್ಟವಾಗಿರಲಿಲ್ಲ ಎಂಬುದನ್ನೂ ಇಲ್ಲಿ ದಾಖಲಿಸಬೇಕು.

ಆದರೂ ಹುನ್ನಾರದ ಸಾಧ್ಯತೆ ಇದ್ದುದರಿಂದಲೇ ಜನವರಿ 26ರಂದು ಶಾಂತಿಯುತವಾಗಿ ರಾಷ್ಟ್ರಧ್ವಜದೊಂದಿಗೆ ಪೊಲೀಸರೊಂದಿಗೂ ಮಾತುಕತೆ ನಡೆಸಿ ಒಪ್ಪಿದ ಮಾರ್ಗದಲ್ಲಿ ಇತಿಹಾಸದಲ್ಲೇ ಬೃಹತ್ತಾದ ಟ್ರ್ಯಾಕ್ಟರ್ ರ್ಯಾಲಿಗೆ ಸಂಘಟಕರು ಮುಂದಾಗಿದ್ದರು.

ಪ್ರಶ್ನೆ: ಈಗ ಮರ್ಯಾದೆ ಹೋಗಿಬಿಟ್ಟಿತಲ್ಲವೇ? ಜನರು ಈಗ ನಂಬುತ್ತಾರಾ?

ಉತ್ತರ: ಯಾವ ಮರ್ಯಾದೆಯೂ ಹೋಗಿಲ್ಲ. ಸಂಯುಕ್ತ್ ಕಿಸಾನ್ ಮೋಚರ್ಾವು ಈ ವಿಚಾರದಲ್ಲಿ ಯಾವುದೇ ತಪ್ಪುಗಳನ್ನು ಎಸಗಿಲ್ಲ. ಮುಂಚಿನಿಂದಲೂ ಹೋರಾಟದ ಜೊತೆಗಿದ್ದವರು ಈಗಲೂ ಜೊತೆಗಿದ್ದಾರೆ. ಅನುಮಾನಗಳು, ಅರೆಬರೆ ಪಾಲ್ಗೊಳ್ಳುವಿಕೆ ಇದ್ದವರು ಮಾತ್ರ ಹೊರ ಹೋಗಿದ್ದಾರೆ. ಮಯರ್ಾದೆ ಹೋಗಿರುವುದು ಸಕರ್ಾರದ್ದು, ಮೀಡಿಯಾಗಳದ್ದು. ಅವರು ಹೇಳಿದ್ದನ್ನು ನಂಬುವ ಜನ ಹಿಂದೆಯೂ ನಂಬುತ್ತಿದ್ದರು.

ಅಲ್ಲಿರುವ ಜನರು ಈಗಲೂ ದೃಢ ಸಂಕಲ್ಪದಿಂದ ಹೋರಾಟವನ್ನು ಮುಂದುವರೆಸುತ್ತಿದ್ದಾರೆ. ಈ ವಿಚಾರದಲ್ಲಿ ಯಾವುದೇ ಹಿಂಜರಿಕೆಯಿಲ್ಲದೇ, ಈ ಶತಮಾನದ ಮಹಾನ್ ಹೋರಾಟದ ಜೊತೆಗೆ ಮತ್ತು ಅದನ್ನು ಮುನ್ನಡೆಸುತ್ತಿರುವವರ ಜೊತೆಗೆ ಗಟ್ಟಿಯಾಗಿ ನಿಲ್ಲುವ ಕೆಲಸವನ್ನು ಪ್ರಜ್ಞಾವಂತರು ಮಾಡಿದರೆ ಇನ್ನೂ ಬೃಹತ್ತಾಗಿ ಬೆಳೆದು ನಿಲ್ಲುತ್ತದೆ.

ನಾವೇನು ಮಾಡಬಹುದು?

ಈ ಸಂದರ್ಭದಲ್ಲಿ ಇಂತಹ ಐತಿಹಾಸಿಕ ಹೋರಾಟವನ್ನು ದಿಕ್ಕುತಪ್ಪಿಸುವ, ದಮನ ಮಾಡುವ ಒಕ್ಕೂಟ ಸಕರ್ಾರದ ಹುನ್ನಾರಕ್ಕೆ ನಾವು ಬಲಿಬೀಳಬಾರದು. ಮಾಧ್ಯಮಗಳು ಜೋರಾಗಿ ಕೂಗಿಕೊಂಡರೆ ಅದೇ ಸತ್ಯವಲ್ಲ. ಮಾರಿಕೊಂಡ ಮಾಧ್ಯಮಗಳಿಗೆ ಈಗ ಗೋದಿ ಮೀಡಿಯಾ ಎಂಬ ಹೆಸರಿದೆ. ಗೋದಿ ಮೀಡಿಯಾಕ್ಕಿಂತ ಜೋರಾಗಿ ಮಿಕ್ಕವರೂ ಅಬ್ಬರಿಸುವುದು ಮತ್ತು ಸರ್ಕಾರದ ಹುನ್ನಾರವನ್ನು ಬಯಲಿಗೆಳೆಯಲು ಕ್ರಿಯಾಶೀಲರಾಗಿರುವುದು ಬಹಳ ಮುಖ್ಯ. ಎಲ್ಲಕ್ಕಿಂತ ಮುಖ್ಯವಾಗಿ ಕನರ್ಾಟಕದಲ್ಲಿ ಹೋರಾಟ ವಿಸ್ತಾರವಾಗುವಂತೆ ಮಾಡಲು ಏನು ಮಾಡಬೇಕೋ ಆ ನಿಟ್ಟಿನತ್ತ ನಾವು ಕೇಂದ್ರೀಕರಿಸಬೇಕು.

ಮುಕ್ತಾಯ

ಕೃಪೆ | ಈ ಸುದ್ದಿ/ವಿಶ್ಲೇಷಣೆ ಮಾಸ್‌ ಮೀಡಿಯಾ ಫೌಂಡೇಷನ್‌ ನೆರವಿನೊಂದಿಗೆ ಪ್ರಕಟಿಸಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version